Bengaluru, ಮಾರ್ಚ್ 28 -- ಅರ್ಥ: ಸಂಜಯನು ಹೇಳಿದನು - ರಾಜನೇ! ಮಹಾ ಯೋಗೀಶ್ವರನು, ದೇವೋತ್ತಮ ಪುರುಷನು, ಹೀಗೆ ಹೇಳಿ ಅರ್ಜುನನಿಗೆ ತನ್ನ ವಿಶ್ವರೂಪವನ್ನು ತೋರಿಸಿದನು.

ಅರ್ಥ: ಅರ್ಜುನನು ಆ ವಿಶ್ವರೂಪದಲ್ಲಿ ಅಸಂಖ್ಯಾತವಾದ ಬಾಯಿಗಳನ್ನೂ, ಅಸಂಖ್ಯಾತವಾದ ಕಣ್ಣುಗಳನ್ನೂ, ಅಸಂಖ್ಯಾತವಾದ ಅದ್ಭುತ ದರ್ಶನಗಳನ್ನೂ ಕಂಡನು. ಆತನು ದಿವ್ಯಮಾಲೆಗಳನ್ನೂ ವಸ್ತ್ರಗಳನ್ನೂ ಧರಿಸಿದ್ದನು. ಹಲವು ದಿವ್ಯ ಗಂಧಗಳನ್ನು ಲೇಪಿಸಿಕೊಂಡಿದ್ದನು. ಎಲ್ಲವೂ ಆಶ್ಚರ್ಯಮಯವಾಗಿದ್ದಿತು, ಉಜ್ವಲವಾಗಿದ್ದಿತು, ಅನಂತವಾಗಿತ್ತು, ವಿಶ್ವತೋ ಮುಖವಾಗಿತ್ತು.

ಭಾವಾರ್ಥ: ಈ ಎರಡು ಶ್ಲೋಕಗಳಲ್ಲಿ ಅನೇಕ ಎನ್ನುವ ಪದವನ್ನು ಮತ್ತೆ ಮತ್ತೆ ಬಳಸಿರುವುದು ಅರ್ಜುನನು ನೋಡುತ್ತಿದ್ದ ಕೈಗಳು, ಬಾಯಿಗಳು, ಕಾಲುಗಳು ಮತ್ತು ಇತರ ಅಭಿವ್ಯಕ್ತಿಗಳ ಸಂಖ್ಯೆಗೆ ಮಿತಿಯೇ ಇರಲಿಲ್ಲ ಎನ್ನುವುದನ್ನು ತೋರಿಸುತ್ತದೆ. ಒಂದು ಸ್ಥಳದಲ್ಲಿ ಕುಳಿತು ಅವೆಲ್ಲವನ್ನೂ ನೋಡಲು ಅರ್ಜುನನಿಗೆ ಸಾಧ್ಯವಾಯಿತು. ಇದು ಕೃಷ್ಣನ ಕಲ್ಪನಾತೀತ ಶಕ್ತಿಯಿಂದ ಸಾಧ್ಯವಾಯಿತು.

ಇದನ್ನೂ ಓದಿ: Rama Navami 20...