ಭಾರತ, ಮೇ 6 -- ಅನುವಾದ: ನಾನು ವಿಶ್ವದ ತಂದೆ, ತಾಯಿ, ಆಧಾರ ಮತ್ತು ಪಿತಾಮಹ. ನಾನು ಜ್ಞಾನದ ಗುರಿ, ಪ್ರವಿತ್ರೀಕರಿಸುವವನು, ಓಂಕಾರ. ನಾನೇ ಋಗ್, ಸಾಮ ಮತ್ತು ಯಜುರ್ ವೇದಗಳು.

ಭಾವಾರ್ಥ: ಚರಾಚರವಾದ ಎಲ್ಲ ವಿಶ್ವದ ಅಭಿವ್ಯಕ್ತಿಗಳು ಕೃಷ್ಣನ ವಿವಿಧ ಶಕ್ತಿಗಳಿಂದ ಪ್ರಕಟವಾದವು. ಐಹಿಕ ಅಸ್ತಿತ್ವದಲ್ಲಿ ನಾವು ಬೇರೆ ಬೇರೆ ಜೀವಿಗಳೊಡನೆ ಬೇರೆಬೇರೆ ಸಂಬಂಧಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ಆ ಜೀವಿಗಳೆಲ್ಲ ಕೃಷ್ಣನ ತಟಸ್ಥ ಶಕ್ತಿಗಳೇ. ಪ್ರಕೃತಿಯ ಸೃಷ್ಟಿಯಲ್ಲಿ ತಂದೆ, ತಾಯಿ, ತಾತ, ಸೃಷ್ಟಿಕರ್ತ ಎಂದು ಅವರಲ್ಲಿ ಕೆಲವರು ಕಾಣಿಸುತ್ತಾರೆ. ಅವರೆಲ್ಲ ಕೃಷ್ಣನ ವಿಭಿನ್ನಾಂಶಗಳೇ. ತಂದೆ-ತಾಯಿಗಳಂತೆ ತೋರುವ ಜೀವಿಗಳು ಕೃಷ್ಣನೇ ಆಗಿದ್ದಾನೆ. ಈ ಶ್ಲೋಕದಲ್ಲಿ ಧಾತಾ ಎಂದರೆ ಸೃಷ್ಟಿಕರ್ತ ಎಂದರ್ಥ. ನಮ್ಮ ತಂದೆತಾಯಿಯವರು ಮಾತ್ರ ಕೃಷ್ಣನ ವಿಭಿನ್ನಾಂಶರು. ಮಾತ್ರವಲ್ಲ, ಸೃಷ್ಟಿಕರ್ತ, ಅರ್ಜಿ, ಅಜ್ಜ ಎಲ್ಲ ಕೃಷ್ಣನೇ. ಆದುದರಿಂದಲೇ ಕೃಷ್ಣನು ಎಲ್ಲ ವೇದಗಳ ಗುರಿ (Bhagavad Gita Updesh in Kannada).

ಇದನ್ನೂ ಓದಿ: ಶಾಶ್ವತ ನೆಮ್ಮದಿಯ...