ಭಾರತ, ಮಾರ್ಚ್ 9 -- ಅರ್ಥ: ಯಾವ ದೈವಿಕ ಸಂಪತ್ತುಗಳಿಂದ ನೀನು ಈ ಎಲ್ಲ ಜಗತ್ತುಗಳನ್ನು ವ್ಯಾಪಿಸಿರುವೆಯೋ ಅವನ್ನು ಕುರಿತು ನನಗೆ ವಿವರವಾಗಿ ಹೇಳು.

ಭಾವಾರ್ಥ: ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ತಾನು ಅರ್ಥಮಾಡಿಕೊಂಡಿದ್ದರಿಂದ ಅರ್ಜುನನಿಗೆ ಆಗಲೇ ತೃಪ್ತಿಯಾಗಿದೆ ಎಂದು ಈ ಶ್ಲೋಕದಲ್ಲಿ ಕಾಣುತ್ತದೆ. ಕೃಷ್ಣನ ಕೃಪೆಯಿಂದ ಅರ್ಜುನನಿಗೆ ವೈಯಕ್ತಿಕ ಅನುಭವವಿದೆ, ಬುದ್ಧಿಶಕ್ತಿಯಿದೆ, ಜ್ಞಾನವಿದೆ ಮತ್ತು ಈ ಸಾಧನಗಳಿಂದ ಮನುಷ್ಯನಿಗೆ ಬರಬಹುದಾದುದೆಲ್ಲ ಇದೆ. ಆತನು ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಅರ್ಥಮಾಡಿಕೊಂಡಿದ್ದಾನೆ. ಅವನಿಗೆ ಯಾವ ಸಂಶಯವೂ ಇಲ್ಲ. ಆದರೂ ಕೃಷ್ಣನು ತನ್ನ ಸರ್ವವ್ಯಾಪಿ ಸ್ವಭಾವವನ್ನು ವಿವರಿಸಬೇಕೆಂದು ಕೃಷ್ಣನನ್ನು ಕೇಳುತ್ತಿದ್ದಾನೆ. ಸಾಮಾನ್ಯವಾಗಿ ಜನರು, ವಿಶೇಷವಾಗಿ ನಿರಾಕಾರವಾದಿಗಳು ಮುಖ್ಯವಾಗಿ ಪರಮದ ಸರ್ವವ್ಯಾಪಿ ಸ್ವಭಾವವನ್ನು ಕುರಿತು ಆಸಕ್ತಿ ಹೊಂದಿರುತ್ತಾರೆ. ಆದುದರಿಂದ ಅರ್ಜುನನು ಕೃಷ್ಣನನ್ನು ಅವನ ವಿವಿಧ ಶಕ್ತಿಗಳ ಮೂಲಕ ತನ್ನ ಸರ್ವವ್ಯಾಪಿ ಸ್ವರೂಪದಲ್ಲಿ ಹೇಗೆ ಅಸ್ತಿತ್ವದಲ್ಲಿದ್...