Bengaluru, ಫೆಬ್ರವರಿ 20 -- ಅರ್ಥ: ಅನ್ಯಚಿಂತೆಯಿಲ್ಲದೆ ಒಂದೇ ಮನಸ್ಸಿನಿಂದ ಯಾರು ನನ್ನನ್ನು ಪೂಜಿಸುತ್ತಾ, ನನ್ನ ದಿವ್ಯರೂಪವನ್ನು ಧ್ಯಾನಿಸುವವರೋ ಅವರಿಗೆ, ನಾನು ಬೇಕಾಗಿರುವುದನ್ನು ಕೊಡುತ್ತೇನೆ ಮತ್ತು ಅವರು ಗಳಿಸಿದ್ದನ್ನು ಕಾಪಾಡುತ್ತೇನೆ.

ಭಾವಾರ್ಥ: ಕೃಷ್ಣಪ್ರಜ್ಞೆಯಿಲ್ಲದೆ ಒಂದು ಕ್ಷಣವೂ ಬದುಕಲಾರದವರಿಗೆ ದಿನದ 24 ಗಂಟೆಯೂ ಕೃಷ್ಣನನ್ನೇ ಕುರಿತು ಯೋಚಿಸದೆ ಬೇರೆ ದಾರಿಯೇ ಇಲ್ಲ. ಭಗವಂತನ ವಿಷಯ ಕೇಳುತ್ತ, ಸಂಕೀರ್ತನೆ ಮಾಡುತ್ತ, ಸ್ಮರಣೆ ಮಾಡುತ್ತ, ಪ್ರಾರ್ಥನೆ ಮಾಡುತ್ತ, ಪೂಜೆ ಮಾಡುತ್ತ, ಭಗವಂತನ ಚರಣಕಮಲಗಳಿಗೆ ನಮಿಸುತ್ತಾ, ಸೇವೆಗಳನ್ನು ಮಾಡುತ್ತ, ಸ್ನೇಹವನ್ನು ಬೆಳೆಸಿಕೊಳ್ಳುತ್ತ ಮತ್ತು ಸಂಪೂರ್ಣವಾಗಿ ಪ್ರಭುವಿಗೆ ಶರಣಾಗುತ್ತ ಅವನ ಭಕ್ತಿ ಸೇವೆಯಲ್ಲಿ ನಿರತರಾಗಿರುತ್ತಾರೆ.

ಇಂತಹ ಚಟುವಟಿಕೆಗಳೆಲ್ಲ ಮಂಗಳಕರವಾದವು ಮತ್ತು ಆಧ್ಯಾತ್ಮಿಕ ಶಕ್ತಿಗಳಿಂದ ತುಂಬಿರುವುವು. ಅವು ಭಕ್ತನನ್ನು ಆತ್ಮಸಾಕ್ಷಾತ್ಕಾರದಲ್ಲಿ ಪರಿಪೂರ್ಣನನ್ನಾಗಿ ಮಾಡುತ್ತವೆ. ದೇವೋತ್ತಮ ಪರಮಪುರುಷನಾದ ಪರಮಾತ್ಮನ ಸಹವಾಸವನ್ನು ಪಡೆಯುವುದೊಂದೇ ...