Bengaluru, ಏಪ್ರಿಲ್ 14 -- ಅರ್ಥ: ನನ್ನ ಈ ಘೋರ ರೂಪವನ್ನು ನೋಡಿ ನೀನು ತಳಮಳಗೊಂಡಿದ್ದೀಯೆ ಮತ್ತು ದಿಗ್ಭ್ರಾಂತನಾಗಿದ್ದೀಯೆ. ಈಗ ಇದು ಮುಕ್ತಾಯವಾಗಲಿ. ನನ್ನ ಭಕ್ತನೆ, ಮತ್ತೆ ಎಲ್ಲ ಅಶಾಂತಿಯಿಂದ ಮುಕ್ತನಾಗು. ಶಾಂತವಾದ ಮನಸ್ಸಿನಿಂದ ಈಗ ನೀನು ಅಪೇಕ್ಷಿಸಿದ ರೂಪವನ್ನು ಕಾಣಬಹುದು.

ಭಾವಾರ್ಥ: ಭಗವದ್ಗೀತೆಯ ಪ್ರಾರಂಭದಲ್ಲಿ ತನ್ನ ಪೂಜ್ಯ ತಾತ ಮತ್ತು ಗುರುಗಳು ಭೀಷ್ಮ, ದ್ರೋಣರನ್ನು ಕೊಲ್ಲುವ ವಿಷಯದಲ್ಲಿ ಅರ್ಜುನನಿಗೆ ಚಿಂತೆಯುಂಟಾಗಿತ್ತು. ಆದರೆ ಕೃಷ್ಣನು ತನ್ನ ತಾತನನ್ನು ಕೊಲ್ಲುವ ವಿಷಯದಲ್ಲಿ ಅವನು ಭಯಪಡಬೇಕಾಗಿಲ್ಲ ಎಂದನು. ಧೃತರಾಷ್ಟ್ರನ ಮಕ್ಕಳು ಕುರುಸಭೆಯಲ್ಲಿ ದೌಪದಿಯ ಸೀರೆಯನ್ನು ಸೆಳೆದಾಗ ಭೀಷ್ಮರೂ ದ್ರೋಣರೂ ಮೌನವಾಗಿದ್ದರು. ಹೀಗೆ ಕರ್ತವ್ಯವನ್ನು ಅಲಕ್ಷ್ಯಮಾಡಿದ್ದಕ್ಕಾಗಿ ಅವರನ್ನು ಕೊಲ್ಲಬೇಕು. ತಮ್ಮ ಅನ್ಯಾಯದ ಕಾರ್ಯದಿಂದ ಅವರು ಆಗಲೇ ಸತ್ತಿದ್ದಾರೆ ಎನ್ನುವುದನ್ನು ತೋರಿಸುವುದಕ್ಕಾಗಿಯೇ ಕೃಷ್ಣನು ಅರ್ಜುನನಿಗೆ ತನ್ನ ವಿಶ್ವರೂಪವನ್ನು ತೋರಿಸಿದನು. ಭಕ್ತರು ಯಾವಾಗಲೂ ಶಾಂತರು ಮತ್ತು ಇಂತಹ ಘೋರ ಕಾರ್ಯಗಳನ್ನು ಮ...