Bengaluru, ಮಾರ್ಚ್ 6 -- ಅರ್ಥ: ಕೃಷ್ಣ, ನೀನು ನನಗೆ ಹೇಳುವುದನ್ನೆಲ್ಲ ಸತ್ಯವೆಂದು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಪ್ರಭುವೇ, ದೇವತೆಗಳಾಗಲಿ ದಾನವರಾಗಲಿ ನಿನ್ನ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲಾರರು.

ಭಾವಾರ್ಥ: ಶ್ರದ್ದೆಯಿಲ್ಲದವರು ಮತ್ತು ದಾನವ ಸ್ವಭಾವದವರು ಕೃಷ್ಣನನ್ನು ಅರ್ಥ ಮಾಡಿಕೊಳ್ಳಲಾರರು; ದೇವತೆಗಳು ಸಹ ಅವನನ್ನು ತಿಳಿಯಲಾರರು. ಇನ್ನು ಆಧುನಿಕ ಜಗತ್ತಿನಲ್ಲಿ ವಿದ್ವಾಂಸರೆಂದು ಕರೆಸಿಕೊಳ್ಳುವವರ ಪಾಡೇನು? ಪರಮ ಪ್ರಭುವಿನ ಕೃಪೆಯಿಂದ ಅರ್ಜುನನು ಪರಮಸತ್ಯವು ಕೃಷ್ಣ ಮತ್ತು ಅವನು ಪರಿಪೂರ್ಣನು ಎಂದು ಅರ್ಥಮಾಡಿಕೊಂಡಿದ್ದಾನೆ. ಆದುದರಿಂದ ಅರ್ಜುನನ ಮಾರ್ಗವನ್ನು ಅನುಸರಿಸಬೇಕು. ಅವನು ಭಗವದ್ಗೀತೆಯ ಪ್ರಮಾಣವನ್ನು ಸ್ವೀಕರಿಸಿದವನು. ನಾಲ್ಕನೆಯ ಅಧ್ಯಾಯದಲ್ಲಿ ವರ್ಣಿಸಿದಂತೆ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಗುರುಶಿಷ್ಯ ಪರಂಪರೆಯು ಕಳೆದು ಹೋಗಿತ್ತು; ಅರ್ಜುನನನ್ನು ತನ್ನ ಅಪ್ತಸ್ನೇಹಿತನೆಂದು, ಶ್ರೇಷ್ಠ ಭಕ್ತನೆಂದು ಭಾವಿಸಿ ಕೃಷ್ಣನು ಅರ್ಜುನನೊಡನೆ ಆ ಗುರುಶಿಷ್ಯ ಪರಂಪರೆಯನ್ನು ಮತ್ತೆ ಪ್ರಾರಂಭಿಸಿ...