Bengaluru, ಮಾರ್ಚ್ 26 -- ಅರ್ಥ: ಅರ್ಜುನ, ನೀನು ಏನೇನನ್ನು ನೋಡಲು ಬಯಸುತ್ತೀಯೋ ಆದೆಲ್ಲವನ್ನೂ ಒಮ್ಮೆಗೇ ಈ ನನ್ನ ದೇಹದಲ್ಲಿ ನೋಡು! ನೀನು ಈಗ ಏನೇನನ್ನು ನೋಡಲು ಬಯಸುತ್ತೀಯೋ ಮತ್ತು ಮುಂದೆ ಏನೇನನ್ನು ನೋಡಲು ಬಯಸಬಹುದೋ ಅದೆಲ್ಲವನ್ನೂ ಈ ವಿಶ್ವರೂಪವು ನಿನಗೆ ತೋರಿಸುವುದು. ಚರಾಚರವಾದದ್ದೆಲ್ಲವೂ ಸಂಪೂರ್ಣವಾಗಿ ಒಂದು ಸ್ಥಳದಲ್ಲಿ ಇಲ್ಲಿವೆ.

ಭಾವಾರ್ಥ: ಒಂದು ಸ್ಥಳದಲ್ಲಿ ಕುಳಿತು ಯಾರೂ ಇಡೀ ವಿಶ್ವವನ್ನು ಕಾಣಲಾರರು. ಅತ್ಯಂತ ಮುಂದುವರಿದ ವಿಜ್ಞಾನಿಯೂ ವಿಶ್ವದ ಇತರ ಭಾಗಗಳಲ್ಲಿ ಆಗುತ್ತಿರುವುದನ್ನು ಕಾಣಲಾರ. ಆದರೆ ಅರ್ಜುನನಂತಹ ಭಕ್ತನು ವಿಶ್ವದ ಯಾವುದೇ ಭಾಗದಲ್ಲಿರುವ ಏನನ್ನಾದರೂ ಕಾಣಬಲ್ಲ. ಭೂತ, ವರ್ತಮಾನ ಮತ್ತು ಭವಿಷ್ಯತ್ತುಗಳಲ್ಲಿ ಅವನು ಕಾಣಲು ಬಯಸುವ ಏನನ್ನೇ ಆದರೂ ಕಾಣುವ ಶಕ್ತಿಯನ್ನು ಕೃಷ್ಣನು ಅವನಿಗೆ ಕೊಡುತ್ತಾನೆ. ಹೀಗೆ ಕೃಷ್ಣನ ದಯೆಯಿಂದ ಅರ್ಜುನನು ಎಲ್ಲವನ್ನೂ ನೋಡಬಲ್ಲವನಾಗುತ್ತಾನೆ.

ಇದನ್ನೂ ಓದಿ: ಸ್ವಾತಿ ನಕ್ಷತ್ರ ವರ್ಷ ಭವಿಷ್ಯ 2025: ಉತ್ತಮ ಆರೋಗ್ಯ ಇರುತ್ತೆ, ಒಂದೇ ರೀತಿಯ ಕೆಲಸ ಬೇಸರ ಮೂಡಿಸಲಿದೆ...