Bengaluru, ಫೆಬ್ರವರಿ 26 -- ಅರ್ಥ: ದೇವೋತ್ತಮ ಪರಮ ಪುರುಷನು ಹೀಗೆಂದು ಹೇಳಿದನು - ಮಹಾಬಾಹುವಾದ ಅರ್ಜುನನೆ, ಮತ್ತೆ ಕೇಳು. ನೀನು ನನ್ನ ಪ್ರೀತಿಯ ಸ್ನೇಹಿತನಾದುದರಿಂದ ನಾನು ನಿನಗಾಗಿ ಇನ್ನೂ ಹೇಳುತ್ತೇನೆ; ನಾನು ಆಗಲೇ ವಿವರಿಸಿರುವ ಜ್ಞಾನಕ್ಕಿಂತ ಇನ್ನೂ ಉತ್ತಮವಾದ ಜ್ಞಾನವನ್ನು ನಿನಗೆ ನೀಡುತ್ತೇನೆ.

ಭಾವಾರ್ಥ: ಭಗವಾನ್ ಎನ್ನುವ ಶಬ್ದವನ್ನು ಪರಾಶರ ಮುನಿಗಳು ಹೀಗೆ ವಿವರಿಸಿದ್ದಾರೆ. ಪೂರ್ಣಶಕ್ತಿ, ಪೂರ್ಣಕೀರ್ತಿ, ಐಶ್ವರ್ಯ, ಜ್ಞಾನ, ಸೌಂದರ್ಯ ಮತ್ತು ವೈರಾಗ್ಯ ಈ ಆರು ಸಿರಿಗಳನ್ನು ಪೂರ್ಣವಾಗಿ ಹೊಂದಿರುವವನು ಭಗವಾನ್ ಅಥವಾ ದೇವೋತ್ತಮ ಪರಮ ಪುರುಷ. ಕೃಷ್ಣನು ಈ ಭೂಮಿಯ ಮೇಲಿದ್ದಾಗ ಈ ಆರು ಸಿರಿಗಳನ್ನೂ ಮೆರೆದನು. ಆದುದರಿಂದ ಪರಾಶರ ಮುನಿಗಳಂತಹ ಶ್ರೇಷ್ಠ ಋಷಿಗಳು ಕೃಷ್ಣನನ್ನು ದೇವೋತ್ತಮ ಪರಮ ಪುರುಷ ಎಂದು ಸ್ವೀಕರಿಸಿದ್ದಾರೆ. ಈಗ ಕೃಷ್ಣನು ಅರ್ಜುನನಿಗೆ ತನ್ನ ಸಿರಿಗಳು ಮತ್ತು ಕಾರ್ಯ ಇವುಗಳನ್ನು ಕುರಿತು ಹೆಚ್ಚು ರಹಸ್ಯ ಜ್ಞಾನವನ್ನು ಬೋಧಿಸುತ್ತಿದ್ದಾನೆ.

ಹಿಂದೆಯೇ ಏಳನೆಯ ಅಧ್ಯಾಯದಿಂದ ಪ್ರಾರಂಭಿಸಿ ಪರಮ ಪ್ರಭುವು ...