Bengaluru, ಏಪ್ರಿಲ್ 11 -- ಅರ್ಥ: ಈ ಸಮಸ್ತ ವಿಶ್ವಕ್ಕೆ, ಚರಾಚರವಾದುದೆಲ್ಲಕ್ಕೆ ನೀನೇ ತಂದೆ. ನೀನು ಪೂಜ್ಯನು, ಪರಮ ಗುರುವು. ನಿನಗೆ ಸಮಾನರಾದವರು ಯಾರೂ ಇಲ್ಲ, ಯಾರೂ ನಿನ್ನೊಡನೆ ಒಂದಾಗಿರುವುದಿಲ್ಲ. ಆದುದರಿಂದ, ಅಪರಿಮಿತ ಪ್ರಭಾವದ ಪ್ರಭುವೆ, ಮೂರು ಲೋಕಗಳಲ್ಲಿ ನಿನಗಿಂತ ಶ್ರೇಷ್ಠರಾದವರು ಯಾರಿದ್ದಾರೆ?

ಭಾವಾರ್ಥ: ದೇವೋತ್ತಮ ಪರಮ ಪುರುಷನಾದ ಕೃಷ್ಣನು ಮಗನಿಗೆ ತಂದೆಯು ಪೂಜ್ಯನಾದಂತೆ ಪೂಜ್ಯನು. ಮೂಲತಃ ಬ್ರಹ್ಮನಿಗೆ ವೇದಗಳನ್ನು ಬೋಧಿಸಿದವನು ಮತ್ತು ಈಗ ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸುತ್ತಿರುವವನು ಆತನೇ. ಆದುದರಿಂದಲೇ ಆತನು ಆದಿ ಗುರು. ಈ ಕ್ಷಣದಲ್ಲಿ ನಿಜವಾದ ಗುರುವಾಗಿರುವ ಯಾರೇ ಆಗಲಿ ಕೃಷ್ಣನಿಂದ ಪ್ರಾರಂಭವಾದ ಗುರು ಶಿಷ್ಯ ಪರಂಪರೆಯಲ್ಲಿ ಬಂದವರು. ಕೃಷ್ಣನ ಪ್ರತಿನಿಧಿಯಾಗದೆ ಯಾರೂ ಅಲೌಕಿಕ ವಿಷಯದಲ್ಲಿ ಗುರುವಾಗಲು ಸಾಧ್ಯವಿಲ್ಲ. ಭಗವಂತನಿಗೆ ಎಲ್ಲ ರೀತಿಗಳಲ್ಲಿ ಪ್ರಣಾಮಗಳನ್ನು ಅರ್ಪಿಸಲಾಗುತ್ತಿದೆ. ಆತನ ಮಹಿಮೆಯು ಅಪರಿಮಿತವಾದದ್ದು. ಅಲೌಕಿಕವಾದ ಅಥವಾ ಐಹಿಕವಾದ ಯಾವುದೇ ಅಭಿವ್ಯಕ್ತಿಯಲ್ಲಿ ಕೃಷ್ಣನಿಗೆ ಸ...