Bengaluru, ಏಪ್ರಿಲ್ 17 -- ಅರ್ಥ: ಹೀಗೆ ಕೃಷ್ಣನನ್ನು ಅವನ ಮೂಲ ರೂಪದಲ್ಲಿ ಕಂಡಾಗ ಅರ್ಜುನನು ಹೀಗೆಂದನು - ಓ ಜನಾರ್ದನ, ಇಷ್ಟೊಂದು ಸುಂದರವಾದ ಮಾನವಸದೃಶ ರೂಪವನ್ನು ಕಂಡು ನನ್ನ ಮನಸ್ಸು ಸಮಾಧಾನವಾಗಿದೆ; ನನ್ನ ಸಹಜ ಸ್ವಭಾವವು ಹಿಂದಿರುಗಿದೆ.

ಭಾವಾರ್ಥ: ಇಲ್ಲಿ ಮಾನುಷಂ ರೂಪಮ್ ಎನ್ನುವ ಮಾತುಗಳು ದೇವೋತ್ತಮ ಪರಮ ಪುರುಷನಿಗೆ ಮೂಲ ರೂಪದಲ್ಲಿ ಎರಡು ಕೈಗಳಿದ್ದವು ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಕೃಷ್ಣನು ಸಾಮಾನ್ಯ ಮನುಷ್ಯ ಎನ್ನುವಂತೆ ತೆಗಳುವವರಿಗೆ ಕೃಷ್ಣನ ದೇವಸ್ವಭಾವವು ತಿಳಿಯದು ಎಂದು ಇಲ್ಲಿ ತೋರಿಸಿಕೊಟ್ಟಿದೆ. ಕೃಷ್ಣನು ಸಾಮಾನ್ಯ ಮನುಷ್ಯನಂತಿದ್ದರೆ ಆತನಿಗೆ ವಿಶ್ವರೂಪವನ್ನಾಗಲಿ ಚತುರ್ಭುಜನಾದ ನಾರಾಯಣ ರೂಪವನ್ನಾಗಲಿ ತೋರಲು ಹೇಗೆ ಸಾಧ್ಯ? ಕೃಷ್ಣನು ಸಾಮಾನ್ಯ ಮನುಷ್ಯ ಎಂದು ಯೋಚಿಸಿ ಮಾತನಾಡುತ್ತಿರುವುದು, ಕೃಷ್ಣನ ಒಳಗಿರುವ ನಿರಾಕಾರ ಬ್ರಹ್ಮನ್ ಎಂದು ಹೇಳಿ ಓದುಗನನ್ನು ತಪ್ಪು ದಾರಿಗಳೆಯುವವನು, ಅತ್ಯಂತ ದೊಡ್ಡ ಅನ್ಯಾಯವನ್ನು ಮಾಡುತ್ತಿದ್ದಾನೆ ಎಂದು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಕೃಷ...