ಭಾರತ, ಏಪ್ರಿಲ್ 20 -- ರಹಸ್ಯತಮ ಜ್ಞಾನ - ಶ್ಲೋಕ - 2ರ ಮುಂದುವರಿದ ಭಾಗದಲ್ಲಿ ವೇದಾಂತ ಸೂತ್ರದಲ್ಲಿ (3.2.26) ಇದನ್ನು ಹೀಗೆ ವರ್ಣಿಸಿದೆ - ಪ್ರಕಾಶಶ್ಚ ಕರ್ಮಣಿ ಅಭ್ಯಾಸಾತ್. ಭಕ್ತಿ ಸೇವೆಯ ಶಕ್ತಿಯು ಎಷ್ಟೆಂದರೆ ಭಕ್ತಿಸೇವೆಯ ಚಟುವಟಿಕೆಗಳಲ್ಲಿ ತೊಡಗುವುದರಿಂದ ನಿಶ್ಚಯವಾಗಿಯೂ ಮನುಷ್ಯನಿಗೆ ಜ್ಞಾನೋದಯವಾಗುತ್ತದೆ. ಇದರ ವಾಸ್ತವ ಉದಾಹರಣೆಯನ್ನು ನಾರದರ ಹಿಂದಿನ ಜನ್ಮದಲ್ಲಿ ನೋಡಬಹುದು. ಆ ಜನ್ಮದಲ್ಲಿ ಅವರು ಒಬ್ಬ ದಾಸಿಯ ಮನನಾಗಿದ್ದರು. ಅವರಿಗೆ ವಿದ್ಯೆಯೂ ಇರಲಿಲ್ಲ ಮತ್ತು ಅವರು ಉತ್ತಮ ಕುಟುಂಬದಲ್ಲಿ ಜನಿಸಿಯೂ ಇರಲಿಲ್ಲ. ಆದರೆ ಅವರ ತಾಯಿಯು ಮಹಾಭಕ್ತರ ಸೇವೆಯಲ್ಲಿ ತೊಡಗಿದ್ದಾಗ ನಾರದರೂ ಅದರಲ್ಲಿ ನಿರತರಾದರು ಮತ್ತು ಕೆಲವೊಮ್ಮೆ ತಾಯಿಯು ಇಲ್ಲದಿದ್ದಾಗ ಸ್ವತಃ) ನಾರದರೇ ಆ ಮಹಾಭಕ್ತರ ಸೇವೆಯನ್ನೂ ಮಾಡುತ್ತಿದ್ದರು. ನಾರದರೇ ಹೀಗೆ ಹೇಳಿದ್ದಾರೆ -

ಋಷಿಗಳ ಸಹವಾಸದಿಂದ ನಾರದರಿಗೆ ಪ್ರಭುವಿನ ದಿವ್ಯ ಮಹಿಮೆಯನ್ನು ಕೇಳುವುದರಲ್ಲಿ ಮತ್ತು ಸಂಕೀರ್ತನೆ ಮಾಡುವುದರಲ್ಲಿ ಅಭಿರುಚಿಯು ಬಂದಿತು. ಅವರು ಭಕ್ತಿಸೇವೆಗಾಗಿ ಹಂಬಲಿಸಿದ...