Bengaluru, ಫೆಬ್ರವರಿ 21 -- ಅರ್ಥ: ದೇವತೆಗಳನ್ನು ಪೂಜಿಸುವವರು ದೇವತೆಗಳ ಮಧ್ಯೆ ಹುಟ್ಟುತ್ತಾರೆ. ಪಿತೃಗಳನ್ನು ಪೂಜಿಸುವವರು ಪಿತೃಗಳ ಬಳಿಗೆ ಹೋಗುತ್ತಾರೆ. ಭೂತಗಳನ್ನು ಪೂಜಿಸುವವರು ಭೂತಗಳ ಮಧ್ಯೆ ಹುಟ್ಟುತ್ತಾರೆ. ನನ್ನನ್ನು ಪೂಜಿಸುವವರು ನನ್ನೊಡನೆ ಇರುತ್ತಾರೆ.

ಭಾವಾರ್ಥ: ಚಂದ್ರ, ಸೂರ್ಯ ಅಥವಾ ಬೇರೆ ಯಾವುದೇ ಲೋಕಕ್ಕೆ ಹೋಗಲು ಬಯಸುವವನು ಈ ಉದ್ದೇಶ ಸಾಧನೆಗಾಗಿ ವೇದಗಳಲ್ಲಿ ಹೇಳಿರುವ ನಿರ್ದಿಷ್ಟ ತತ್ವಗಳನ್ನು ಅನುಸರಿಸಿ ಬಯಸಿದ ಸ್ಥಳವನ್ನು ಸೇರಬಹುದು. ವೇದಗಳಲ್ಲಿ ಫಲಾಪೇಕ್ಷಿತ ಕರ್ಮಗಳನ್ನು ವಿವರಿಸುವ ಭಾಗದಲ್ಲಿ ಇವನ್ನು ವಿವರವಾಗಿ ವರ್ಣಿಸಿದೆ. ಬೇರೆ ಬೇರೆ ಸ್ವರ್ಗಲೋಕಗಳಲ್ಲಿ ನೆಲೆಸಿರುವ ದೇವತೆಗಳ ನಿರ್ದಿಷ್ಟ ಪೂಜೆಯನ್ನು ವೇದಗಳು ಸೂಚಿಸುತ್ತವೆ. ಇದೇ ರೀತಿಯಲ್ಲಿ ಒಂದು ನಿರ್ದಿಷ್ಟ ಯಜ್ಞವನ್ನು ಮಾಡಿ ಪಿತೃಲೋಕಕ್ಕೆ ಹೋಗಬಹುದು. ಹೀಗೆಯೇ ಅನೇಕ ಭೂತಲೋಕಗಳಿಗೆ ಹೋಗಿ ಯಕ್ಷ, ರಾಕ್ಷಸ ಅಥವಾ ಪಿಶಾಚಿ ಆಗಬಹುದು. ಪಿಶಾಚಿ ಪೂಜೆಯನ್ನು 'ಮಾಟ' ಅಥವಾ 'ಅಭಿಚಾರ' ಎಂದು ಕರೆಯುತ್ತಾರೆ. ಅಂತಹ ಮಾಟ ಅಥವಾ ಅಭಿಚಾರವನ್ನು ಅಭ್ಯ...