Bengaluru, ಏಪ್ರಿಲ್ 9 -- ಅರ್ಥ: ಅರ್ಜುನನು ಹೇಳಿದನು - ಇಂದ್ರಿಯಗಳ ಪ್ರಭುವಾದ ಹೃಷೀಕೇಶನೆ, ನಿನ್ನ ಹೆಸರನ್ನು ಕೇಳಿಯೇ ಇಡೀ ಜಗತ್ತು ಸಂತೋಷ ಪಡುತ್ತದೆ. ಆದುದರಿಂದ ಎಲ್ಲರೂ ನಿನ್ನಲ್ಲಿ ಅನುರಾಗಗೊಳ್ಳುತ್ತಾರೆ. ಸಿದ್ದರು ನಿನಗೆ ತಮ್ಮ ಗೌರವ ಪೂರ್ವಕ ನಮಸ್ಕಾರಗಳನ್ನು ಅರ್ಪಿಸುತ್ತಾರೆ. ರಾಕ್ಷಸರು ಬೆದರಿ ಎಲ್ಲ ದಿಕ್ಕುಗಳಲ್ಲಿ ಓಡಿ ಹೋಗುತ್ತಾರೆ. ಇದೆಲ್ಲ ಯುಕ್ತವೇ ಸರಿ.

ಭಾವಾರ್ಥ: ಕುರುಕ್ಷೇತ್ರದ ಪರಿಣಾಮವನ್ನು ಕೃಷ್ಣನಿಂದ ಕೇಳಿದಾಗ ಅರ್ಜುನನಿಗೆ ಜ್ಞಾನೋದಯವಾಯಿತು. ದೇವೋತ್ತಮ ಪರಮ ಪುರುಷನ ಮಹಾಭಕ್ತನೂ ಸ್ನೇಹಿತನೂ ಆಗಿ ಅರ್ಜುನನು ಕೃಷ್ಣನು ಮಾಡಿದುದೆಲ್ಲ ಯೋಗ್ಯವೇ ಎಂದು ಹೇಳಿದನು. ಭಕ್ತರನ್ನು ರಕ್ಷಿಸುವವನೂ, ಭಕ್ತರ ಆರಾಧ್ಯ ದೈವವೂ ಕೃಷ್ಣನೇ. ಅನಿಷ್ಟರಾದವರನ್ನು ನಾಶಮಾಡುವವನೂ ಕೃಷ್ಣನೇ ಎಂದು ಅರ್ಜುನನು ದೃಢಪಡಿಸುತ್ತಾನೆ. ಅವನ ಕಾರ್ಯಗಳು ಎಲ್ಲರಿಗೂ ಸಮಾನವಾಗಿ ಒಳಿತನ್ನು ಮಾಡುತ್ತವೆ. ಕುರುಕ್ಷೇತ್ರ ಯುದ್ಧದ ಮುಕ್ತಾಯದ ಹಂತದಲ್ಲಿ ಹೊರ ಆಕಾಶದಲ್ಲಿ ಅನೇಕರು ದೇವತೆಗಳು, ಸಿದ್ದರು, ಉನ್ನತ ಲೋಕಗಳ ಧೀಮಂತರು ಎಲ್ಲ ...