Bengaluru, ಮಾರ್ಚ್ 1 -- ಅರ್ಥ: ಸಪ್ತರ್ಷಿಗಳು ಮತ್ತು ಅವರ ಪೂರ್ವದ ನಾಲ್ವರು ಮಹರ್ಷಿಗಳು ಎಲ್ಲರೂ ನನ್ನಿಂದ ಬಂದರು; ನನ್ನ ಮನಸ್ಸಿನಿಂದ ಹುಟ್ಟಿದರು. ವಿವಿಧ ಲೋಕಗಳಲ್ಲಿರುವ ಜೀವಿಗಳೆಲ್ಲ ಅವರ ಸಂತಾನದವರೇ.

ಭಾವಾರ್ಥ: ಶ್ರೀಕೃಷ್ಣ ಪರಮಾತ್ಮನು ವಿಶ್ವದ ಜನತೆಯ ವಂಶವೃಕ್ಷವನ್ನು ಸಂಗ್ರಹವಾಗಿ ಕೊಡುತ್ತಿದ್ದಾನೆ. ಹಿರಣ್ಯಗರ್ಭ ಎಂದು ಕರೆಯುವ ಪರಮ ಪ್ರಭುವಿನ ಶಕ್ತಿಯಿಂದ ಮೊದಲು ಹುಟ್ಟಿದವನು ಬ್ರಹ್ಮ. ಬ್ರಹ್ಮನಿಂದ ಸಪ್ತರ್ಷಿಗಳು, ಅವರಿಂದ ಸನಕ, ಸನಂದ, ಸನಾತನ ಮತ್ತು ಸನತ್ಕುಮಾರ ಎನ್ನುವ ನಾಲ್ವರು ಮಹರ್ಷಿಗಳು ಮತ್ತು ಮನುಗಳು ರೂಪ ಪಡೆದರು. ಈ ಮಹರ್ಷಿಗಳು ವಿಶ್ವದ ಎಲ್ಲ ಜೀವಿಗಳ ಪ್ರಜಾಪತಿಗಳೆಂದು ಹೆಸರಾಗಿದ್ದಾರೆ. ಅಸಂಖ್ಯಾತ ವಿಶ್ವಗಳಿವೆ ಮತ್ತು ಅಸಂಖ್ಯಾತ ಲೋಕಗಳಿವೆ. ಪ್ರತಿಯೊಂದು ಲೋಕವೂ ವಿವಿಧ ಬಗೆಯ ಜನಗಳಿಂದ ತುಂಬಿಹೋಗಿದೆ. ಅವರೆಲ್ಲರೂ ಈ 25 ಮಂದಿ ಪ್ರಜಾಪತಿಗಳ ಸಂತಾನುರೇ ಆಗಿದ್ದಾರೆ.

ಸೃಷ್ಟಿ ಮಾಡುವುದು ಹೇಗೆ ಎನ್ನುವುದನ್ನು ತಿಳಿಯುವ ಮೊದಲು ಬ್ರಹ್ಮನು ದೇವತೆಗಳ ಲೆಕ್ಕದ ಒಂದು ಸಾವಿರ ವರ್ಷಗಳ ಕಾಲ ತಪಸ್ಸು ಮ...