ಭಾರತ, ಮಾರ್ಚ್ 20 -- ಅನುವಾದ: (ಸಾತ್ವಿಕ, ರಾಜಸ ಮತ್ತು ತಾಮಸವೆನ್ನುವ) ಮೂರು ಗುಣಗಳಿಂದ ಮೋಹಿತವಾಗಿ ಈ ಸಮಸ್ತ ಜಗತ್ತು ನನ್ನನ್ನು ಅರಿಯದೆ ಇದೆ. ನಾನು ಈ ಗುಣಗಳನ್ನು ಮೀರಿದವನು ಮತ್ತು ಅವ್ಯಯನು.

ಭಾವಾರ್ಥ: ಇಡೀ ಜಗತ್ತು ಐಹಿಕ ಪ್ರಕೃತಿಯ ಮೂರು ಗುಣಗಳಿಂದ ಮೋಹಗೊಂಡಿದೆ. ಈ ಮೂರು ಗುಣಗಳಿಂದ ಗೊಂದಲಕ್ಕೆ ಸಿಕ್ಕಿರುವವರು ಈ ಐಹಿಕ ಪ್ರಕೃತಿಯನ್ನು ಮೀರಿದ ಪರಮ ಪ್ರಭು ಕೃಷ್ಣನಿದ್ದಾನೆ ಎಂದು ಅರ್ಥಮಾಡಿಕೊಳ್ಳಲಾರರು.

Bhagavad Gita Updesh in Kannada: ಐಹಿಕ ಪ್ರಕೃತಿಯ ಪ್ರಭಾವಕ್ಕೆ ಸಿಕ್ಕಿರುವ ಪ್ರತಿಯೊಂದು ಜೀವಿಗೂ ಒಂದು ವಿಶಿಷ್ಟ ದೇಹವೂ ಅದಕ್ಕನುಗುಣವಾಗಿ ಒಂದು ವಿಶಿಷ್ಟ ರೀತಿಯ ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳೂ ಇರುತ್ತದೆ. ಪ್ರಕೃತಿಯ ತ್ರಿಗುಣಗಳಲ್ಲಿ ನಾಲ್ಕು ವರ್ಗಗಳ ಜನರು ಕಾರ್ಯಪ್ರವೃತ್ತರಾಗಿದ್ದಾರೆ. ಸಂಪೂರ್ಣವಾಗಿ ಸಾತ್ವಿಕ ಗುಣದವರನ್ನು ಬ್ರಾಹ್ಮಣರು ಎಂದು ಕರೆಯುತ್ತಾರೆ. ಸಂಪೂರ್ಣವಾಗಿ ರಾಜಸ ಗುಣದವರನ್ನು ಕ್ಷತ್ರಿಯರು ಎಂದು ಕರೆಯುತ್ತಾರೆ. ರಾಜಸ ಮತ್ತು ತಾಮಸ ಎರಡೂ ಗುಣಗಳಿರುವವರನ್ನು ವೈಶ್ಯ...