Bengaluru, ಫೆಬ್ರವರಿ 18 -- ಅರ್ಥ: ನಾನೇ ಗುರಿಯು, ನಾನೇ ಪೋಷಿಸುವವನು, ನಾನೇ ಯಜಮಾನನು, ನಾನೇ ಸಾಕ್ಷಿ, ನಾನೇ ನಿವಾಸ, ನಾನೇ ಆಶ್ರಯ, ನಾನೇ ಅತ್ಯಂತ ಆಪ್ತ ಗೆಳೆಯ, ನಾನೇ ಸೃಷ್ಟಿ, ನಾನೇ ಪ್ರಳಯ, ನಾನೇ ಎಲ್ಲಕ್ಕೂ ಆಧಾರ, ನಾನೇ ವಿಶ್ರಾಂತಿ ತಾಣ, ನಾನೇ ಶಾಶ್ವತವಾದ ಬೀಜ. (ಅಧ್ಯಾಯ 9, ರಹಸ್ಯತಮ ಜ್ಞಾನ, ಶ್ಲೋಕ 18)

ಭಾವಾರ್ಥ: ಈ ಶ್ಲೋಕದಲ್ಲಿ ಗತಿ ಎಂದರೆ ನಾವು ಸೇರಲು ಬಯಸುವ ಗುರಿ. ಜನಕ್ಕೆ ಇದು ತಿಳಿಯದಿದ್ದರೂ ಕಟ್ಟಕಡೆಯ ಗುರಿ ಕೃಷ್ಣ ಪರಮಾತ್ಮನೇ. ಕೃಷ್ಣನನ್ನು ಅರಿಯದವನು ದಾರಿತಪ್ಪಿದ್ದಾನೆ. ಪ್ರಗತಿ ಎಂದು ಕರೆಯುವ ಅವನ ಪ್ರಯಾಣವು ಪಾರ್ಶ್ವಿಕವಾದದ್ದು ಅಥವಾ ಭ್ರಾಂತಿಯಿಂದ ಕೂಡಿದ್ದು. ಬೇರೆಬೇರೆ ದೇವತೆಗಳನ್ನು ತಮ್ಮ ಗುರಿಯನ್ನಾಗಿ ಮಾಡಿಕೊಂಡವರು ಅನೇಕರಿದ್ದಾರೆ. ಆಯಾ ದೇವತೆಗಳಿಗೆ ಸಂಬಂಧಿಸಿದಂತೆ ಬೇರೆಬೇರೆ ವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಅವರು ಚಂದ್ರ ಲೋಕ, ದೇವತಾ ಲೋಕ, ಇಂದ್ರ ಲೋಕ, ಮೃತ್ಯು ಲೋಕ ಮೊದಲಾದ ವಿವಿಧ ಲೋಕಗಳನ್ನು ತಲುಪುತ್ತಾರೆ. ಆದರೆ ಇಂತಹ ಲೋಕಗಳೆಲ್ಲ ಕೃಷ್ಣನ ಸೃಷ್ಟಿಯಾದ್ದರಿಂದ ಏಕ...