Bengaluru, ಮಾರ್ಚ್ 31 -- ಅರ್ಥ: ನೀನು ಒಬ್ಬನೇ; ಆದರೂ ನೀನು ಆಕಾಶವನ್ನೂ ಎಲ್ಲ ಲೋಕಗಳನ್ನೂ ಅವುಗಳ ನಡುವಣ ಎಲ್ಲ ಸ್ಥಳವನ್ನೂ ವ್ಯಾಪಿಸಿದ್ದೀಯೆ. ಮಹಾತ್ಮನೆ, ಈ ಅದ್ಭುತವಾದ ಮತ್ತು ಉಗ್ರವಾದ ರೂಪವನ್ನು ಕಂಡು ಮೂರು ಲೋಕಗಳು ಭಯಗೊಂಡಿವೆ.

ಭಾವಾರ್ಥ: ದ್ಯಾವಾ ಪೃಥಿವೋಃ (ಸ್ವರ್ಗ ಮತ್ತು ಭೂಮಿಗಳ ನಡುವಣ ಸ್ಥಳ) ಮತ್ತು ಲೋಕತ್ರಯಮ್ (ಮೂರು ಲೋಕಗಳು) ಈ ಶ್ಲೋಕದಲ್ಲಿ ಮಹತ್ವದ ಶಬ್ದಗಳು. ಏಕೆಂದರೆ ಪ್ರಭುವಿನ ಈ ವಿಶ್ವರೂಪವನ್ನು ಅರ್ಜುನನು ಮಾತ್ರವಲ್ಲದೆ ಇತರ ಲೋಕವ್ಯೂಹಗಳಲ್ಲಿರುವವರು ನೋಡಿದರು ಎಂದು ಕಾಣುತ್ತದೆ. ಅರ್ಜುನನು ವಿಶ್ವರೂಪವನ್ನು ಕಂಡದ್ದು ಕನಸಾಗಿರಲಿಲ್ಲ. ಪ್ರಭುವು ಯಾರು ಯಾರಿಗೆ ದಿವ್ಯದೃಷ್ಟಿಯನ್ನು ಕರುಣಿಸಿದನೋ ಅವರೆಲ್ಲರೂ ರಣರಂಗದಲ್ಲಿನ ಈ ವಿಶ್ವರೂಪವನ್ನು ಕಂಡರು.

ಅರ್ಥ: ದೇವತೆಗಳ ಸಮೂಹಗಳೆಲ್ಲ ನಿನ್ನ ಮುಂದೆ ಶರಣಾಗತವಾಗಿ ನಿನ್ನನ್ನೇ ಪ್ರವೇಶಿಸುತ್ತಿರುವುವು. ಅವರಲ್ಲಿ ಕೆಲವರು ಭಯಭೀತರಾಗಿ ಕೈಮುಗಿದುಕೊಂಡು ಪ್ರಾರ್ಥನೆ ಮಾಡುತ್ತಿದ್ದಾರೆ. ಮಹರ್ಷಿಗಳ ಮತ್ತು ಪರಿಪೂರ್ಣ ಸಿದ್ಧರ ಸಮೂಹಗಳು "ಸ್ವಸ್ತಿ, ಸ್...