Bengaluru, ಮಾರ್ಚ್ 10 -- ಅರ್ಥ: ಜನಾರ್ದನ, ನಿನ್ನ ಸಿರಿಗಳ ಯೋಗಶಕ್ತಿಯನ್ನು ಮತ್ತೆ ವಿವರವಾಗಿ ವರ್ಣಿಸು. ನಿನ್ನ ವಿಷಯ ಕೇಳುವುದು ಸಾಕು ಎಂದೇ ನನಗೆ ಅನಿಸುವುದಿಲ್ಲ. ನಿನ್ನ ವಿಷಯವನ್ನು ಕೇಳಿದಷ್ಟೂ ನಿನ್ನ ಮಾತುಗಳ ಅದ್ಭುತವನ್ನು ಸವಿಯಬೇಕು ಎನ್ನಿಸುತ್ತದೆ.

ಭಾವಾರ್ಥ: ಶೌನಕನು ಮುಂದಾಳುವಾಗಿದ್ದ ನೈಮಿಷಾರಣ್ಯದ ಋಷಿಗಳು ಸೂತಮುನಿಗಳಿಗೆ ಇಂತಹುದೇ ಮಾತನ್ನು ಹೇಳಿದರು. ಅವರು ಹೇಳಿದ್ದು ಹೀಗೆ -

ವಯಂ ತು ನ ವಿತೃಪ್ಯಾಮ ಉತ್ತಮಶ್ಲೋಕವಿಕ್ರಮೇ |

ಯಚ್ಛೃಣ್ವತಾಂ ರಸಜ್ಞಾನಾಂ ಸ್ವಾದು ಸ್ವಾದು ಪದೇ ಪದೇ ||

"ಸೊಗಸಾದ ಸ್ತೋತ್ರಗಳು ಯಾರ ಮಹಿಮೆಯನ್ನು ಹಾಡುವುವೋ ಆ ಕೃಷ್ಣನ ಲೀಲೆಗಳನ್ನು ಪದೇ ಪದೇ ಕೇಳಿದರೂ ಸಾಕೆನಿಸುವುದೇ ಇಲ್ಲ. ಕೃಷ್ಣನೊಡನೆ ಒಂದು ದಿವ್ಯ ಸಂಬಂಧವನ್ನು ಪಡೆದುಕೊಂಡವರು ಹೆಜ್ಜೆ ಹೆಜ್ಜೆಗೂ ಪ್ರಭುವಿನ ಲೀಲೆಗಳನ್ನು ಸವಿಯುತ್ತಾರೆ" ಹೀಗೆ ಅರ್ಜುನನಿಗೆ ಕೃಷ್ಣನ ವಿಷಯವನ್ನು ಕೇಳುವುದರಲ್ಲಿ ಆಸಕ್ತಿ. ಅದರಲ್ಲಿಯೂ ಅವನು ಹೇಗೆ ಸರ್ವವ್ಯಾಪಿ ಪರಮ ಪ್ರಭುವಾಗಿಯೇ ಇರುತ್ತಾನೆ ಎನ್ನುವುದರಲ್ಲಿ ಆಸಕ್ತಿಯಿದೆ. ಅಮೃತದ ...