Bengaluru, ಏಪ್ರಿಲ್ 12 -- ಅರ್ಥ: ನಾನು ಹಿಂದೆ ನೋಡದಿದ್ದ ಈ ವಿಶ್ವರೂಪವನ್ನು ಕಂಡು ಸಂತೋಷಪಟ್ಟಿದ್ದೇನೆ. ಆದರೆ ಅದೇ ಕಾಲದಲ್ಲಿ ನನ್ನ ಮನಸ್ಸು ಭಯದಿಂದ ತಲ್ಲಣಗೊಂಡಿದೆ. ಹೇ ಪ್ರಭುಗಳ ಪ್ರಭುವೇ, ಜಗನ್ನಿವಾಸನೇ, ನನ್ನಲ್ಲಿ ಕೃಪೆಮಾಡಿ ದೇವೋತ್ತಮ ಪರಮ ಪುರುಷನಾದ ನಿನ್ನ ರೂಪವನ್ನು ನನಗೆ ಮತ್ತೆ ತೋರಿಸು.

ಭಾವಾರ್ಥ: ಅರ್ಜುನನು ಕೃಷ್ಣನ ಪರಮ ಪ್ರಿಯಸಖನಾದದ್ದರಿಂದ ಯಾವಾಗಲೂ ಆತನಿಗೆ ಪ್ರೀತಿಪಾತ್ರನು. ಅರ್ಜುನನು ಪ್ರಿಯಸ್ನೇಹಿತನಾಗಿ ತನ್ನ ಸ್ನೇಹಿತನ ಸಿರಿಯನ್ನು ಕಂಡು ಹರ್ಷಪಟ್ಟಿದ್ದಾನೆ. ತನ್ನ ಸ್ನೇಹಿತನಾದ ಕೃಷ್ಣನು ದೇವೋತ್ತಮ ಪರಮ ಪುರುಷ ಮತ್ತು ಇಂತಹ ಅದ್ಭುತವಾದ ವಿಶ್ವರೂಪವನ್ನು ತೋರಿಸಬಲ್ಲ ಎಂದು ಅರ್ಜುನನಿಗೆ ಸಂತೋಷವಾಗಿದೆ. ಆದರೆ ಅದೇ ಕಾಲದಲ್ಲಿ ವಿಶ್ವರೂಪವನ್ನು ಕಂಡು ತನ್ನ ಪರಿಶುದ್ಧ ಸ್ನೇಹದ ಕಾರಣದಿಂದ ಕೃಷ್ಣನ ವಿಷಯದಲ್ಲಿ ಹಲವು ಅಪರಾಧಗಳನ್ನು ಮಾಡಿದ್ದೇನೆ ಎಂದು ಅವನಿಗೆ ಭಯವಾಗುತ್ತದೆ. ಹೀಗೆ ಅವನು ಭಯಪಡಲು ಕಾರಣವೇ ಇಲ್ಲದಿದ್ದರೂ ಭಯದಿಂದ ಅವನ ಮನಸ್ಸು ವ್ಯಗ್ರವಾಗಿದೆ. ಆದುದರಿಂದ ಕೃಷ್ಣನು ತನ್ನ ನಾರಾಯಣ...