Bengaluru, ಏಪ್ರಿಲ್ 13 -- ಅರ್ಥ: ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು ಪ್ರಿಯ ಅರ್ಜುನ, ನಾನು ಪ್ರಸನ್ನನಾಗಿ ನನ್ನ ಅಂತರಂಗಶಕ್ತಿಯಿಂದ ಈ ಐಹಿಕ ಜಗತ್ತಿನಲ್ಲಿ ಈ ಪರಮ ವಿಶ್ವರೂಪವನ್ನು ನಿನಗೆ ತೋರಿಸಿದ್ದೇನೆ. ಅನಂತವೂ, ತೇಜೋಮಯವೂ ಆದ ಈ ಆದಿ ರೂಪವನ್ನು ನಿನಗೆ ಮೊದಲು ಯಾರೂ ನೋಡಿಲ್ಲ.

ಭಾವಾರ್ಥ: ಅರ್ಜುನನು ಪರಮ ಪ್ರಭುವಿನ ವಿಶ್ವರೂಪವನ್ನು ಕಾಣಲು ಬಯಸಿದನು. ಆದುದರಿಂದ ತನ್ನ ಭಕ್ತನಾದ ಅರ್ಜುನನಲ್ಲಿ ಇದ್ದ ದಯೆಯಿಂದ ಶ್ರೀಕೃಷ್ಣನು ತೇಜಸ್ಸು ಮತ್ತು ಸಿರಿಗಳಿಂದ ಕೂಡಿದ ವಿಶ್ವರೂಪವನ್ನು ತೋರಿಸಿದನು. ಈ ರೂಪವು ಸೂರ್ಯನಂತೆ ಕಣ್ಣನ್ನು ಕೋರೈಸುತ್ತಿತ್ತು ಮತ್ತು ಅದರ ಹಲವು ಮುಖಗಳು ವೇಗವಾಗಿ ಬದಲಾಗುತ್ತಿದ್ದವು. ತನ್ನ ಗೆಳೆಯ ಅರ್ಜುನನ ತೃಪ್ತಿಗಾಗಿ ಪ್ರಭುವು ಈ ರೂಪವನ್ನು ತೋರಿಸಿದನು. ತನ್ನ ಅಂತರಂಗಶಕ್ತಿಯಿಂದ ಕೃಷ್ಣನು ಈ ರೂಪವನ್ನು ತೋರಿಸಿದನು. ಈ ಶಕ್ತಿಯನ್ನು ಮನುಷ್ಯನ ಊಹೆಯು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅರ್ಜುನನಿಗೆ ಮೊದಲು ಈ ವಿಶ್ವರೂಪವನ್ನು ಯಾರೂ ಕಂಡಿರಲಿಲ್ಲ. ಆದರೆ ಈ ರೂಪವನ್ನು ಅರ್ಜುನನಿಗೆ ತೋರಿಸ...