Bengaluru, ಫೆಬ್ರವರಿ 27 -- ಅರ್ಥ: ಯಾರು ನನ್ನನ್ನು ಜನ್ಮವಿಲ್ಲದವನು, ಅನಾದಿ ಮತ್ತು ಎಲ್ಲ ಲೋಕಗಳ ಪರಮ ಪ್ರಭು ಎಂದು ಅರಿಯುತ್ತಾನೆಯೋ ಅವನು ಮಾತ್ರ, ಮನುಷ್ಯರಲ್ಲಿ ಭ್ರಾಂತಿಯಿಲ್ಲದವನಾಗಿ, ಎಲ್ಲ ಪಾಪಗಳಿಂದ ಬಿಡುಗಡೆ ಹೊಂದುತ್ತಾನೆ.

ಭಾವಾರ್ಥ: ಏಳನೆಯ ಅಧ್ಯಾಯದಲ್ಲಿ ಹೇಳಿರುವಂತೆ ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ ತಮ್ಮನ್ನು ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಏರಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಸಾಮಾನ್ಯ ಮನುಷ್ಯರಲ್ಲ. ಆಧ್ಯಾತ್ಮಿಕ ಸಾಕ್ಷಾತ್ಕಾರದ ತಿಳುವಳಿಕೆಯಿಲ್ಲದ ಲಕ್ಷಾಂತರ ಮಂದಿಗಿಂತ ಅವರು ಶ್ರೇಷ್ಠರು. ತಮ್ಮ ಆಧ್ಯಾತ್ಮಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ವಾಸ್ತವವಾಗಿ ಪ್ರಯತ್ನಿಸುತ್ತಿರುವವರಲ್ಲಿ ಕೃಷ್ಣನು ದೇವೋತ್ತಮ ಪರಮ ಪುರುಷ. ಎಲ್ಲದರ ಒಡೆಯ. ಅವನಿಗೆ ಹುಟ್ಟಿಲ್ಲ ಎನ್ನುವ ತಿಳುವಳಿಕೆಯನ್ನು ಪಡೆಯುವವನೇ ಅತ್ಯಂತ ಯಶಸ್ವಿಯಾಗಿ ಆತ್ಮಸಾಕ್ಷಾತ್ಕಾರವನ್ನು ಪಡೆದವನು. ಈ ಹಂತದಲ್ಲಿ ಮಾತ್ರ, ಕೃಷ್ಣನ ಪರಮ ಸ್ಥಾನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡವನು ಎಲ್ಲ ಪಾಪ ಪ್ರತಿಕ್ರಿಯೆಗಳಿಂದ ಸ...