Bengaluru, ಏಪ್ರಿಲ್ 10 -- ಅರ್ಥ: ನೀನು ಆದಿ ದೇವೋತ್ತಮ ಪುರುಷನು; ಪುರಾಣ ಪುರುಷನು; ಈ ಪ್ರಕಟಿತ ವಿಶ್ವದ ಕಟ್ಟಕಡೆಯ ಆಶ್ರಯ ನೀನು. ಎಲ್ಲವನ್ನೂ ತಿಳಿದವನು ನೀನು; ತಿಳಿಯಲು ಸಾಧ್ಯವಿರುವುದೆಲ್ಲ ನೀನೇ. ಭೌತಿಕ ಗುಣಗಳನ್ನು ಮೀರಿದ ಪರಂಧಾಮನು ನೀನು. ಹೇ ಅನಂತರೂಪನೆ! ಈ ವಿಶ್ವವನ್ನೆಲ್ಲ ನೀನು ವ್ಯಾಪಿಸಿರುವೆ!

ಭಾವಾರ್ಥ: ಎಲ್ಲವೂ ದೇವೋತ್ತಮ ಪರಮ ಪುರುಷನನ್ನು ಅವಲಂಬಿಸಿದೆ. ಆದುದರಿಂದ ಅವನೇ ಕಡೆಯ ಶಾಂತಿಯ ತಾಣ. ನಿಧಾನಮ್ ಎಂದರೆ ಎಲ್ಲವೂ, ಬ್ರಹ್ಮಜ್ಯೋತಿಯೂ ಸಹ, ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನೇ ಅವಲಂಬಿಸಿದೆ ಎಂದು ಅರ್ಥ. ಈ ಪ್ರಪಂಚದಲ್ಲಿ ನಡೆಯುವುದೆಲ್ಲವನ್ನೂ ತಿಳಿದವನು ಅವನು. ಜ್ಞಾನಕ್ಕೆ ಕೊನೆ ಏನಾದರೂ ಇದ್ದರೆ ಅದು ಅವನೇ. ಆದುದರಿಂದ ಅವನೇ ಜ್ಞಾನ ಮತ್ತು ಜ್ಞೇಯ. ಅವನೇ ಜ್ಞಾನದ ಗುರಿ. ಏಕೆಂದರೆ ಅವನು ಸರ್ವವ್ಯಾಪಿ. ಅವನೇ ಆಧ್ಯಾತ್ಮಿಕ ಜಗತ್ತಿನಲ್ಲಿ ಕಾರಣನು. ಆದುದರಿಂದ ಅವನು ದಿವ್ಯನು. ಅಲೌಕಿಕ ಜಗತ್ತಿನಲ್ಲಿ ಅವನೇ ಪ್ರಧಾನನು.

ಇದನ್ನೂ ಓದಿ: ಈ ತಿಂಗಳಿನಿಂದ 3 ರಾಶಿಯವರು ಶನಿ ದೋಷದಿಂದ ಮುಕ್ತರಾಗುತ್...