Bengaluru, ಫೆಬ್ರವರಿ 24 -- ಅರ್ಥ: ಕುಂತಿಯ ಮಗನಾದ ಅರ್ಜುನನೇ, ಅವನು ಶೀಘ್ರವಾಗಿ ಧರ್ಮಾತ್ಮನಾಗುತ್ತಾನೆ ಮತ್ತು ಶಾಶ್ವತ ಶಾಂತಿಯನ್ನು ಪಡೆಯುತ್ತಾನೆ. ನನ್ನ ಭಕ್ತನು ಎಂದೂ ನಾಶವಾಗುವುದಿಲ್ಲ ಎಂದು ಧೈರ್ಯವಾಗಿ ಘೋಷಿಸು.

ಭಾವಾರ್ಥ: ಇದನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬಾರದು. ಏಳನೆಯ ಅಧ್ಯಾಯದಲ್ಲಿ ಪರಮ ಪ್ರಭುವು, ಕಿಡಿಗೇಡಿತನದಲ್ಲಿ ತೊಡಗಿರುವವನು ಪರಮ ಪ್ರಭುವಿನ ಭಕ್ತನಾಗಲಾರ ಎಂದು ಹೇಳುತ್ತಾನೆ. ಪರಮ ಪ್ರಭುವಿನ ಭಕ್ತನಲ್ಲದವನಿಗೆ ಯಾವುದೇ ಒಳ್ಳೆಯ ಅರ್ಹತೆಗಳಿಲ್ಲ. ಈ ಪ್ರಶ್ನೆಯು ಉಳಿಯುತ್ತದೆ ಆಕಸ್ಮಿಕವಾಗಿಯಾಗಲಿ, ಉದ್ದೇಶಪೂರ್ವಕವಾಗಿಯಾಗಲಿ ಅಸಹ್ಯಕರ ಚಟುವಟಿಕೆಗಳಲ್ಲಿ ತೊಡಗಿರುವವನು ಪರಿಶುದ್ಧ ಭಕ್ತನು ಹೇಗಾದಾನು? ನ್ಯಾಯವಾಗಿಯೇ ಈ ಪ್ರಶ್ನೆಯನ್ನು ಕೇಳಬಹುದು. ಏಳನೆಯ ಅಧ್ಯಾಯದಲ್ಲಿ ಹೇಳಿದಂತೆ, ಪ್ರಭುವಿನ ಭಕ್ತಿಸೇವೆಗೆ ಬಾರದೆಯೇ ಇರುವ ದುಷ್ಕರ್ಮಿಗಳಿಗೆ, ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ, ಒಳ್ಳೆಯ ಅರ್ಹತೆಗಳೇ ಇರುವುದಿಲ್ಲ. ಸಾಮಾನ್ಯವಾಗಿ, ಭಕ್ತಿಸೇವೆಯ ಒಂಬತ್ತು ವಿಧಗಳಲ್ಲಿ ತೊಡಗಿರುವ ಭಕ್ತನು ಹೃದಯದಿಂದ ಎ...