Bengaluru, ಏಪ್ರಿಲ್ 8 -- ಅರ್ಥ: ಆದುದರಿಂದ ಎದ್ದೇಳು, ಯುದ್ಧ ಮಾಡಿ ಕೀರ್ತಿಯನ್ನು ಪಡೆ. ನಿನ್ನ ಶತ್ರುಗಳನ್ನು ಸೋಲಿಸಿ ಸಮೃದ್ಧವಾದ ರಾಜ್ಯವನ್ನು ಅನುಭವಿಸು. ನನ್ನ ವ್ಯವಸ್ಥೆಯಿಂದ ಆಗಲೇ ಅವರು ಹತರಾಗಿದ್ದಾರೆ. ಸವ್ಯಸಾಚಿಯೆ, ನೀನು ಯುದ್ದದಲ್ಲಿ ಒಂದು ನಿಮಿತ್ತ ಮಾತ್ರ.

ಭಾವಾರ್ಥ: ಸವ್ಯಸಾಚಿಯೆಂದರೆ ರಣರಂಗದಲ್ಲಿ ಬಹು ನೈಪುಣ್ಯದಿಂದ ಬಾಣಗಳನ್ನು ಬಿಡುವವನು ಎಂದರ್ಥ; ಆದುದರಿಂದ, ತನ್ನ ಶತ್ರುಗಳನ್ನು ಕೊಲ್ಲಲು ಸಾಮರ್ಥ್ಯವಿರುವ ಬಾಣಗಳನ್ನು ಪ್ರಯೋಗಿಸುವ ನಿಪುಣ ಯೋಧ ಎಂದು ಅರ್ಜುನನನ್ನು ಸಂಬೋಧಿಸಿದೆ. ನಿಮಿತ್ತ ಮಾತ್ರಮ್ ''ನೀನು ಒಂದು ಸಾಧನ ಮಾತ್ರ ಆಗು." ಈ ಮಾತು ಅರ್ಥವತ್ತಾದದ್ದು. ಇಡೀ ಜಗತ್ತು ದೇವೋತ್ತಮ ಪರಮ ಪುರುಷನ ಯೋಜನೆಯಂತೆ ಸಾಗುತ್ತಿದೆ. ತಕ್ಕಷ್ಟು ತಿಳುವಳಿಕೆ ಇಲ್ಲದ ಮೂಢರು ಪ್ರಕೃತಿಯು ಯೋಜನೆಯಿಲ್ಲದೆ ಸಾಗುತ್ತಿದೆ ಮತ್ತು ಎಲ್ಲ ಅಭಿವ್ಯಕ್ತಿಗಳು ಅಕಸ್ಮಾತ್ತಾಗಿ ಆದ ರಚನೆಗಳು ಎಂದು ಭಾವಿಸುತ್ತಾರೆ. ವಿಜ್ಞಾನಿಗಳೆಂದು ಕರೆಸಿಕೊಳ್ಳುವ ಅನೇಕರು ಪ್ರಾಯಶಃ ಅದು ಆದದ್ದು ಹೀಗಿರಬಹುದು, ಹಾಗಿರಬಹುದು ಎಂದು ಸೂ...