Bengaluru, ಮಾರ್ಚ್ 19 -- ಅರ್ಥ: ಶಾಸನ ಅವಿಧೇಯತೆಯನ್ನು ದಮನ ಮಾಡುವ ರೀತಿಗಳಲ್ಲಿ ನಾನು ಶಿಕ್ಷೆ, ಜಯವನ್ನು ಅರಸುವವರಲ್ಲಿ ನಾನು ನೀತಿ, ಗುಹ್ಯ ವಿಷಯಗಳಲ್ಲಿ ನಾನು ಮೌನ, ಜ್ಞಾನಿಗಳ ಜ್ಞಾನ ನಾನು.

ಭಾವಾರ್ಥ: ದಮನ ಮಾಡುವ ಸಾಧನಗಳು ಹಲವು. ಇವುಗಳಲ್ಲಿ ದುಷ್ಕರ್ಮಿಗಳನ್ನು ಕತ್ತರಿಸಿ ಹಾಕುವ ಸಾಧನಗಳು ತುಂಬ ಮುಖ್ಯವಾದವು. ದುಷ್ಕರ್ಮಿಗಳನ್ನು ಕತ್ತರಿಸಿ ಶಿಕ್ಷೆ ಮಾಡಿದಾಗ ಶಿಕ್ಷೆಯ ಸಾಧನವು ಕೃಷ್ಣನ ಪ್ರತಿನಿಧಿ. ಯಾವುದಾದರೂ ಕಾರ್ಯಕ್ಷೇತ್ರದಲ್ಲಿ ವಿಜಯವನ್ನು ಸಾಧಿಸಲು ಪ್ರಯತ್ನಿಸುವವರ ನಡುವೆ ಅತ್ಯಂತ ಜಯಶಾಲಿ ಅಂಶ ನೀತಿ, ಶ್ರವಣ, ಚಿಂತನ ಮತ್ತು ಧ್ಯಾನ ಈ ಗುಹ್ಯ ಚಟುವಟಿಕೆಗಳಲ್ಲಿ ಮೌನವೇ ತುಂಬ ಮುಖ್ಯ. ಏಕೆಂದರೆ ಮೌನದಿಂದ ಮನುಷ್ಯನು ಬಹುಶೀಘ್ರವಾಗಿ ಮುಂದುವರಿಯಬಲ್ಲ. ಜಡವಸ್ತು ಮತ್ತು ಚೇತನ - ಇವುಗಳ ನಡುವೆ, ಭಗವಂತನ ಮೇಲ್ಮಟ್ಟದ ಮತ್ತು ಕೆಳಮಟ್ಟದ ಪ್ರಕೃತಿಗಳ ನಡುವೆ ವ್ಯತ್ಯಾಸವನ್ನು ಕಾಣಬಲ್ಲವನು ಜ್ಞಾನಿ. ಇಂತಹ ಜ್ಞಾನವು ಸ್ವಯಂ ಕೃಷ್ಣನೇ.

ಇದನ್ನೂ ಓದಿ: Mirror Vastu: ಈ ದಿಕ್ಕಿನಲ್ಲಿ ಕನ್ನಡಿ ಇದ್ದರೆ ಯಮನನ್ನ...