Bengaluru, ಫೆಬ್ರವರಿ 28 -- ಅರ್ಥ: ಬುದ್ದಿ, ಜ್ಞಾನ, ಸಂದೇಹ ಮತ್ತು ಭ್ರಾಂತಿಗಳಿಂದ ಬಿಡುಗಡೆ, ಕ್ಷಮೆ, ಸತ್ಯ, ಇಂದ್ರಿಯನಿಗ್ರಹ, ಮನೋನಿಗ್ರಹ, ಸುಖ-ದುಃಖಗಳು, ಹುಟ್ಟು, ಸಾವು, ಭಯ, ನಿರ್ಭಯ, ಅಹಿಂಸೆ, ಸಮಚಿತ್ತತೆ, ತುಷ್ಟಿ, ತಪಸ್ಸು, ದಾನ, ಕೀರ್ತಿ ಮತ್ತು ಅಪಕೀರ್ತಿ ಜೀವಿಗಳ ಈ ಎಲ್ಲ ಗುಣಗಳನ್ನೂ ಸೃಷ್ಟಿಸಿದವನು ನಾನೊಬ್ಬನೇ.

ಭಾವಾರ್ಥ: ಜೀವಿಗಳ ಗುಣಗಳು ಒಳ್ಳೆಯದ್ದಾಗಿರಲಿ, ಕೆಟ್ಟದ್ದಾಗಿರಲಿ ಎಲ್ಲವನ್ನೂ ಸೃಷ್ಟಿಸಿದವನು ಕೃಷ್ಣನೇ. ಈ ಗುಣಗಳನ್ನು ಇಲ್ಲಿ ವರ್ಣಿಸಲಾಗಿದೆ. ಬುದ್ದಿ ಎಂದರೆ ವಿಷಯಗಳನ್ನು ಸರಿಯಾದ ದೃಷ್ಟಿಯಿಂದ ವಿಶ್ಲೇಷಣೆ ಮಾಡುವ ಶಕ್ತಿ. ಜ್ಞಾನ ಎಂದರೆ ಚೇತನ ಯಾವುದು? ಜಡವಸ್ತು ಯಾವುದು ಎನ್ನುವ ವಿವೇಚನೆಗೆ ಸಂಬಂಧಿಸಿದ್ದು. ವಿಶ್ವವಿದ್ಯಾನಿಲಯದ ವಿದ್ಯಾಭ್ಯಾಸದಿಂದ ಪಡೆದುಕೊಂಡ ಸಾಮಾನ್ಯ ಜ್ಞಾನವು ಜಡವಸ್ತುವಿಗೆ ಸಂಬಂಧಿಸಿದ್ದು. ಅದನ್ನು ಜ್ಞಾನ ಎಂದು ಇಲ್ಲಿ ಒಪ್ಪುವುದಿಲ್ಲ. (ಜ್ಞಾನ ಎಂದರೆ ಚೇತನ ಮತ್ತು ಜಡವಸ್ತುಗಳ ನಡುವಣ ವ್ಯತ್ಯಾಸದ ತಿಳಿವಳಿಕೆ. ಆಧುನಿಕ ವಿದ್ಯಾಭ್ಯಾಸದಲ್ಲಿ ಚೇತನಕ್ಕೆ ಸಂಬಂಧಿ...