Bengaluru, ಮಾರ್ಚ್ 5 -- ಅರ್ಥ: ಅರ್ಜುನನು ಹೇಳಿದನು - ನೀನು ದೇವೋತ್ತಮ ಪರಮ ಪುರುಷ, ಪರಂಧಾಮ, ಪವಿತ್ರ, ಪರಿಪೂರ್ಣ ಸತ್ಯ. ನೀನು ನಿತ್ಯನು, ದಿವ್ಯನು, ಆದಿಪುರುಷನು, ನಿನಗೆ ಹುಟ್ಟಿಲ್ಲ; ನೀನೇ ಅತ್ಯಂತ ಶ್ರೇಷ್ಠನು. ನಾರದ, ಅಸಿತ, ದೇವಲ ಮತ್ತು ವ್ಯಾಸರಂತಹ ಮಹರ್ಷಿಗಳು ನಿನ್ನ ವಿಷಯದಲ್ಲಿ ಈ ಸತ್ಯವನ್ನು ದೃಢಪಡಿಸುತ್ತಾರೆ. ಈಗ ನೀನೇ ಇದನ್ನು ನನಗೆ ಹೇಳುತ್ತಿದ್ದೀಯೆ.

ಭಾವಾರ್ಥ: ಈ ಎರಡು ಶ್ಲೋಕಗಳಲ್ಲಿ ಪ್ರಭುವು ಆಧುನಿಕ ತತ್ವಶಾಸ್ತ್ರಜ್ಞನಿಗೆ ಒಂದು ಅವಕಾಶವನ್ನು ಕೊಡುತ್ತಿದ್ದಾನೆ; ಏಕೆಂದರೆ ಪರಮ ಪ್ರಭುವು ವ್ಯಕ್ತಿಗತ ಆತ್ಮಕ್ಕಿಂತ ಭಿನ್ನನಾದವನು ಎನ್ನುವುದು ಸ್ಪಷ್ಟ. ಅರ್ಜುನನು ಭಗವದ್ಗೀತೆಯ ಈ ಅಧ್ಯಾಯದ ನಾಲ್ಕು ಬಹು ಮುಖ್ಯ ಶ್ಲೋಕಗಳನ್ನು ಕೇಳಿದನಂತರ ಎಲ್ಲ ಸಂದೇಹಗಳಿಂದಲೂ ಮುಕ್ತನಾಗಿ ಶ್ರೀಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಒಪ್ಪಿಕೊಂಡ. ಕೂಡಲೇ ಧೈರ್ಯವಾಗಿ, "ನೀನೇ ಪರಬ್ರಹ್ಮ, ದೇವೋತ್ತಮ ಪರಮ ಪುರುಷ" ಎಂದು ಸಾರಿದ. ಹಿಂದೆ ಕೃಷ್ಣನು ತಾನೇ ಎಲ್ಲದರ ಮತ್ತು ಎಲ್ಲ ಜನರ ಸೃಷ್ಟಿಕರ್ತ ಎಂದು ಹೇಳಿದ್ದ. ಪ್...