Bengaluru, ಮಾರ್ಚ್ 21 -- ಅರ್ಥ: ಎಲ್ಲ ಶ್ರೀಮಂತವಾದ, ಸುಂದರವಾದ ಮತ್ತು ಉಜ್ವಲವಾದ ಸೃಷ್ಟಿಗಳು ನನ್ನ ವೈಭವದ ಒಂದು ಕಿಡಿಯಿಂದ ಮೂಡಿಬಂದಿವೆ ಎಂದು ತಿಳಿ.

ಭಾವಾರ್ಥ: ಒಂದು ತೇಜಸ್ವೀ ಅಥವಾ ಸುಂದರ ಅಸ್ತಿತ್ವವು ಆಧ್ಯಾತ್ಮಿಕ ಜಗತ್ತಿನಲ್ಲಿರಬಹುದು ಅಥವಾ ಭೌತಿಕ ಜಗತ್ತಿನಲ್ಲಿರಬಹುದು. ಅದು ಕೃಷ್ಣನ ಸಂಪತ್ತಿನ ಒಂದು ಸಣ್ಣ ಅಭಿವ್ಯಕ್ತಿ ಎಂದು ತಿಳಿಯಬೇಕು. ಅಸಾಧಾರಣ ಶ್ರೀಮಂತಿಕೆಯ ಯಾವ ವಸ್ತುವನ್ನಾದರೂ ಕೃಷ್ಣನ ಸಿರಿಯ ಪ್ರತಿನಿಧಿ ಎಂದು ತಿಳಿಯಬೇಕು.

ಅರ್ಥ: ಅರ್ಜುನ, ಈ ವಿವರವಾದ ಜ್ಞಾನದ ಆಗತ್ಯವೇನು? ನನ್ನ ಒಂದೇ ಅಂಶದಿಂದ ನಾನು ಇಡೀ ವಿಶ್ವವನ್ನು ವ್ಯಾಪಿಸಿ ಧರಿಸಿದ್ದೇನೆ.

ಇದನ್ನೂ ಓದಿ: ಏಪ್ರಿಲ್ ನಲ್ಲಿ ಮದುವೆ ಕಾರ್ಯಗಳಿಗೆ ಎಷ್ಟು ಶುಭ ದಿನಗಳಿವೆ; ಮುಹೂರ್ತದ ಸಂಪೂರ್ಣ ಪಟ್ಟಿ ಇಲ್ಲಿದೆ

ಭಾವಾರ್ಥ: ಪರಮ ಪ್ರಭುವು ಪರಮಾತ್ಮನಾಗಿ ಎಲ್ಲ ವಸ್ತುಗಳನ್ನು ಪ್ರವೇಶಿಸಿರುವುದರಿಂದ ಇಡೀ ಐಹಿಕ ವಿಶ್ವಗಳಲ್ಲಿ ಅವನ ಪ್ರತಿನಿಧಿಗಳಿದ್ದಾರೆ. ಇಲ್ಲಿ ಪ್ರಭುವು ವಸ್ತುಗಳು ತಮ್ಮ ಪ್ರತ್ಯೇಕ ಶ್ರೀಮಂತಿಕೆ ಮತ್ತು ವೈಭವಗಳಲ್ಲಿ ಹೇಗೆ...