Bengaluru, ಫೆಬ್ರವರಿ 14 -- ಅರ್ಥ: ಹೀಗೆ ದಿಗ್ಭ್ರಮೆಯಾದವರನ್ನು ರಾಕ್ಷಸೀ ಮತ್ತು ನಾಸ್ತಿಕ ಅಭಿಪ್ರಾಯಗಳು ಆಕರ್ಷಿಸುತ್ತವೆ. ಈ ಭ್ರಾಂತಿಯ ಸ್ಥಿತಿಯಲ್ಲಿ ಅವರ ಮುಕ್ತಿಯ ಭರವಸೆಗಳು, ಅವರ ಫಲಾಪೇಕ್ಷಿತ ಕರ್ಮಗಳು ಮತ್ತು ಅವರ ಜ್ಞಾನ ಸಂಸ್ಕಾರ ಎಲ್ಲ ಸೋತು ಹೋಗುತ್ತವೆ.

ಭಾವಾರ್ಥ: ತಾವು ಕೃಷ್ಣನ ಧ್ಯಾನದಲ್ಲಿದ್ದೇವೆ ಮತ್ತು ಭಕ್ತಿಸೇವೆಯಲ್ಲಿ ತೊಡಗಿದ್ದೇವೆ ಎಂದು ಭಾವಿಸಿಕೊಳ್ಳುವ ಅನೇಕ ಭಕ್ತರು ಪರಮಾತ್ಮ ಕೃಷ್ಣನೇ ಪರಿಪೂರ್ಣವಾದ ಸತ್ಯ ಎಂದು ಸ್ವೀಕರಿಸುವುದಿಲ್ಲ.

ಭಗವಂತನ ಸೇವೆಯಲ್ಲಿಯೇ ನಿರತರಾಗುವುದಿಲ್ಲ. ಹಲವರು ಪುಣ್ಯಕಾರ್ಯಗಳಲ್ಲಿ ತೊಡಗಿಸಿಕೊಂಡು, ಐಹಿಕ ಬಂಧನದಿಂದ ಕಟ್ಟಕಡೆಗೆ ಬಿಡುಗಡೆಯಾಗುತ್ತೇವೆ ಎಂಬ ಭರವಸೆಯ ಫಲಾಪೇಕ್ಷೆಯುಳ್ಳ ಕಾರ್ಯಗಳನ್ನೇ ಮಾಡುತ್ತಾರೆ. ಅವರೂ ಯಶಸ್ವಿಗಳಾಗುವುದಿಲ್ಲ. ಏಕೆಂದರೆ ಅವರು ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ತೆಗಳುತ್ತಾರೆ. ಅಂದರೆ ಅವರು ಕೃಷ್ಣನನ್ನು ಅಪಹಾಸ್ಯ ಮಾಡುವವರು ರಾಕ್ಷಸ ಸ್ವಭಾವದವರು ಅಥವಾ ನಾಸ್ತಿಕರು ಆಗಿರುತ್ತಾರೆ. ಭಗವದ್ಗೀತೆಯ ಏಳನೆಯ ಅಧ್ಯಾಯದಲ್ಲಿ ವರ್ಣಿಸಿ...