Bengaluru, ಮಾರ್ಚ್ 18 -- ಅರ್ಥ: ಮೋಸಗಾರರ ಜೂಜು ನಾನೇ. ತೇಜಸ್ವಿಗಳ ತೇಜಸ್ಸು ನಾನು. ನಾನು ಜಯ, ನಾನು ಸಾಹಸ, ಬಲಿಷ್ಠರ ಬಲವೂ ನಾನೇ.

ಭಾವಾರ್ಥ: ವಿಶ್ವದಲ್ಲಿ ನಾನಾ ಬಗೆಯ ಮೋಸಗಾರರುಂಟು. ಇತರ ಎಲ್ಲ ಮೋಸ ರೀತಿಗಳನ್ನು ಮೀರಿಸಿದ್ದು ಜೂಜು. ಆದುದರಿಂದ ಅದು ಕೃಷ್ಣನ ಪ್ರತಿನಿಧಿ. ಪರಮನಾಗಿ ಕೃಷ್ಣನು ಇತರರಿಗಿಂತ ಹೆಚ್ಚು ಮೋಸಗಾರನಾಗಿರಬಲ್ಲ. ಯಾರೂ ಆತನ ಮೋಸವನ್ನು ಆತನಿಗೆ ತಿಳಿಯದಂತೆ ಕಂಡುಹಿಡಿಯಲಾರರು. ಅವನ ಹಿರಿಮೆಗೆ ಒಂದೇ ಮುಖವಲ್ಲ; ಅದಕ್ಕೆ ಎಲ್ಲ ಮುಖಗಳುಂಟು. ಜಯಶಾಲಿಗಳಲ್ಲಿ ಆತನು ಜಯ. ತೇಜಸ್ವಿಗಳ ತೇಜಸ್ಸು ಅವನು. ಸಾಹಸಿಗಳು, ಶ್ರಮಪಡುವವರಲ್ಲಿ ಆತನೇ ಮಹಾಸಾಹಸಿ, ಅತ್ಯಂತ ಶ್ರಮಪಡುವವನು. ಕೃಷ್ಣನು ಭೂಮಿಯ ಮೇಲೆ ಇದ್ದಾಗ ಅವನನ್ನು ಯಾರೂ ಬಲದಲ್ಲಿ ಮೀರಿಸುವವರಿರಲಿಲ್ಲ. ಬಾಲ್ಯದಲ್ಲಿಯೇ ಗೋವರ್ಧನಗಿರಿಯನ್ನು ಎತ್ತಿದವನು ಅವನು. ಮೋಸದಲ್ಲಿ ಯಾರೂ ಅವನನ್ನು ಮೀರಿಸಲಾರರು; ತೇಜಸ್ಸಿನಲ್ಲಿ ಅವನನ್ನು ಯಾರೂ ಮೀರಿಸಲಾರರು; ಜಯದಲ್ಲಿ ಯಾರೂ ಅವನನ್ನು ಮೀರಿಸಲಾರರು; ಸಾಹಸದಲ್ಲಿ ಯಾರೂ ಅವನನ್ನು ಮೀರಿಸಲಾರರು ಮತ್ತು ಶಕ್ತಿಯಲ...