Bengaluru, ಫೆಬ್ರವರಿ 12 -- ಅರ್ಥ: ಧನಂಜಯನೆ, ಈ ಎಲ್ಲ ಕಾರ್ಯವು ನನ್ನನ್ನು ಬಂಧಿಸುವುದಿಲ್ಲ. ನಾನು ತಟಸ್ಥನಂತೆ ಕುಳಿತಿದ್ದು ಈ ಎಲ್ಲ ಐಹಿಕ ಚಟುವಟಿಕೆಗಳ ಬಗ್ಗೆ ನಿರ್ಲಿಪ್ತನಾಗಿರುತ್ತೇನೆ.
ಭಾವಾರ್ಥ: ಭಗವಂತನಿಗೆ ಯಾವ ಕೆಲಸವೂ ಇಲ್ಲ ಎಂಬುದು ಈ ಶ್ಲೋಕದ ಅರ್ಥವಲ್ಲ. ಪರಮಾತ್ಮನ ದಿವ್ಯಜಗತ್ತಿನಲ್ಲಿ ಅವನು ಸದಾ ಕಾರ್ಯತತ್ಪರನಾಗಿರುತ್ತಾನೆ. ಆತನು ಯಾವಾಗಲೂ ತನ್ನ ಶಾಶ್ವತವಾದ, ಆನಂದಮಯವಾದ, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ. ಆದರೆ ಈ ಐಹಿಕ ಚಟುವಟಿಕೆಗಳಿಗೂ ಅವನಿಗೂ ಯಾವುದೇ ಸಂಬಂಧವಿಲ್ಲ. ಐಹಿಕ ಚಟುವಟಿಕೆಗಳನ್ನು ಅವನ ಬೇರೆ ಬೇರೆ ಶಕ್ತಿಗಳು ನಡೆಸಿಕೊಂಡು ಹೋಗುತ್ತವೆ. ಜಗತ್ತಿನ ಐಹಿಕ ಕ್ರಿಯೆಗಳ ವಿಷಯದಲ್ಲಿ ಪ್ರಭುವು ಯಾವಾಗಲೂ ತಟಸ್ಥನು. ಅದನ್ನು ಇಲ್ಲಿ ಉದಾಸೀನವತ್ ಎನ್ನುವ ಪದದಿಂದ ಹೇಳಿದೆ. ಅವನಿಗೆ ಐಹಿಕ ಕ್ರಿಯೆಗಳ ಪ್ರತಿಯೊಂದು ವಿವರದ ಮೇಲೂ ಹತೋಟಿಯಿದೆ. ಆದರೂ ತಟಸ್ಥನಂತೆ ಕುಳಿತಿರುತ್ತಾನೆ. ತನ್ನ ಆಸನದಲ್ಲಿ ಕುಳಿತಿರುವ ಉಚ್ಚ ನ್ಯಾಯಾಲಯದ ನ್ಯಾಯಾಧೀಶನ ನಿದರ್ಶನವನ್ನು ಇಲ್ಲಿ ಕೊಡಬಹುದು. ಅವನ ಆ...
Click here to read full article from source
To read the full article or to get the complete feed from this publication, please
Contact Us.