Bengaluru, ಜನವರಿ 30 -- ಭಗವದ್ಗೀತೆ, ಇದು ದ್ವಾಪರ ಯುಗದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ನೀಡಿರುವ ಉಪದೇಶವಾಗಿದೆ. ಇದು ಅವರಿಬ್ಬರ ನಡುವಿನ ಸಂಭಾಷಣೆಯಾಗಿದೆ. ಅಂದು ಶ್ರೀಕೃಷ್ಣನು ಹೇಳಿದ ಅಮೃತವಾಣಿಯು ಇಂದಿನ ಈ ಕಲಿಯುಗದಲ್ಲೂ ಪ್ರಸ್ತುತವಾಗಿದೆ. ಗೀತೆಯ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡ ವ್ಯಕ್ತಿ ಭವಿಷ್ಯದ ದಿನಗಳಲ್ಲಿ ಯಶಸ್ವಿಯಾಗುವುದು ಖಚಿತ. ಗೀತೆಯಲ್ಲಿ ಬರೆದ ವಿಷಯಗಳು ಇಡೀ ಮಾನವ ಸಮಾಜಕ್ಕೆ ಬದುಕುವ ಕಲೆಯನ್ನು ಕಲಿಸುತ್ತವೆ. ಇವು ವ್ಯಕ್ತಿಯೊಬ್ಬನಿಗೆ ಜೀವನದಲ್ಲಿ ಒಂದು ಉದ್ದೇಶವನ್ನು ನೀಡುವ ಮೂಲಕ ಮಾರ್ಗದರ್ಶನ ಮಾಡುತ್ತದೆ. ಜೀವನವನ್ನು ಸಮತೋಲನ ಮತ್ತು ಶಾಂತಿಯಿಂದ ಬದುಕಲು ಪ್ರೇರೇಪಿಸುತ್ತವೆ. ಗೀತೆಯು ಮನುಷ್ಯನ ಯೋಗ್ಯತೆ ಮತ್ತು ದೋಷಗಳೆರಡನ್ನೂ ವಿವರಿಸುತ್ತದೆ. ದೋಷಗಳನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿಯು ಜೀವನದಲ್ಲಿ ಏನನ್ನೂ ಸಾಧಿಸಲಾರ. ಹಾಗಾದರೆ ಶ್ರೀಕೃಷ್ಣನ ಪ್ರಕಾರ ಯಾವ ಅಭ್ಯಾಸಗಳನ್ನು ಹೊಂದಿರುವ ವ್ಯಕ್ತಿಯಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ನೋಡೋಣ.

ನಿರಂತರವಾಗಿ ವಿಶ್ರಮಿಸುವ ಮತ್ತು ಸೋಮಾರಿಯಾದ...