Bengaluru, ಜನವರಿ 26 -- ಸನಾತನ ಧರ್ಮದಲ್ಲಿ ಜೀವನ ನಡೆಸುವ ಮಾರ್ಗವನ್ನು ಹೇಳುವ ಅನೇಕ ಗ್ರಂಥಗಳಿವೆ. ಆ ಗ್ರಂಥಗಳಲ್ಲಿ ಭಗವದ್ಗೀತೆಯು ಬಹಳ ವಿಶೇಷವಾಗಿದೆ. ಗೀತೆಯನ್ನು ಓದುವ ವ್ಯಕ್ತಿ ಇತರರಿಗಿಂತ ತುಂಬಾ ಭಿನ್ನವಾಗಿರುತ್ತಾನೆ. ಇಂಥ ವ್ಯಕ್ತಿಗಳು ಭೌತಿಕ ಜಗತ್ತಿನ ಜಂಜಾಟಗಳಿಗೆ ಸಿಲುಕಿ ಹಾಕಿಕೊಳ್ಳುವುದಿಲ್ಲ. ಭಗವದ್ಗೀತೆ ಮನುಷ್ಯನನ್ನು ಮುನ್ನಡೆಯಲು ಪ್ರೇರೇಪಿಸುತ್ತದೆ. ತನ್ನ ಜೀವನದಲ್ಲಿ ಗೀತಾ ಬೋಧನೆಗಳನ್ನು ಅನುಸರಿಸುವವನು, ನಿಸ್ಸಂದೇಹವಾಗಿ ಒಂದು ದಿನ ತನ್ನ ಗಮ್ಯಸ್ಥಾನವನ್ನು ತಲುಪುತ್ತಾನೆ. ಗೀತಾ ಬೋಧನೆಗಳು ಮನುಷ್ಯನ ಧಾರ್ಮಿಕ, ನೈತಿಕ ಮತ್ತು ತಾತ್ವಿಕ ದೃಷ್ಟಿಕೋನವನ್ನು ಬಲಪಡಿಸುತ್ತದೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಉದ್ದೇಶಪೂರ್ವಕ ಕೆಲಸ, ಭಕ್ತಿ, ಜ್ಞಾನ ಮತ್ತು ಯೋಗದ ಅಗತ್ಯವಿದೆ ಎಂಬುದು ಗೀತೋಪದೇಶದ ಸಾರವಾಗಿದೆ. ಇದು ಮಾನಸಿಕ ಶಾಂತಿ ಮತ್ತು ಆತ್ಮಸಾಕ್ಷಾತ್ಕಾರದ ಕಡೆಗೆ ವ್ಯಕ್ತಿಯನ್ನು ಕರೆದುಕೊಂಡು ಹೋಗುತ್ತದೆ. ಉತ್ತಮ ಮಾರ್ಗದರ್ಶನ ನೀಡುತ್ತದೆ. ಇದೇ ರೀತಿ ಭಗವದ್ಗೀತೆಯಲ್ಲಿ ಕೆಲವು ವಿಷಯಗಳ ಬಗ್ಗೆ ಅ...