ಭಾರತ, ಫೆಬ್ರವರಿ 16 -- ಅರ್ಥ: ನಾನು ವೈದಿಕವಿಧಿ, ನಾನೇ ಯಜ್ಞ ನಾನೇ ಪಿತೃಗಳಿಗೆ ಅರ್ಪಿಸುವ ಆಹುತಿ, ನಾನೇ ಔಷಧ ಮೂಲಿಕೆ, ನಾನೇ ಮಂತ್ರ. ನಾನೇ ಆಜ್ಯ, ನಾನೇ ಅಗ್ನಿ, ನಾನೇ ಹುತ.

ಭಾವಾರ್ಥ: ಈ ಶ್ಲೋಕದಲ್ಲಿ ಶ್ರೀಕೃಷ್ಣನು ನಾನು ಯಾರು ಮತ್ತು ತನ್ನ ಅಸ್ತಿತ್ವ ಎಲ್ಲೆಲ್ಲಿದೆ ಎಂಬುದನ್ನು ಹೇಳಿದ್ದಾನೆ. ಜ್ಯೋತಿಷ್ಟೋಮ ಎಂಬ ವೈದಿಕಯಜ್ಞವು ಕೃಷ್ಣನೇ ಆಗಿದ್ದಾನೆ. ಅವನೇ ಸ್ಮೃತಿಯಲ್ಲಿ ಹೇಳಿರುವ ಮಹಾಯಜ್ಞನಾಗಿದ್ದಾನೆ. ಪಿತೃಲೋಕಕ್ಕೆ ಅಥವಾ ಪಿತೃಗಳನ್ನು ಪ್ರಸನ್ನಗೊಳಿಸಲು ಅರ್ಪಿಸುವ ತುಪ್ಪದ ರೂಪದ ಔಷಧ ಎಂದು ಭಾವಿಸುವ ಆಹುತಿಯೂ ಕೃಷ್ಣನೇ. ಯಜ್ಞ ಮಾಡುವ ಸಂದರ್ಭದಲ್ಲಿ ಉಚ್ಚರಿಸುವ ಮಂತ್ರಗಳೂ ಕೃಷ್ಣನೇ ಆಗಿದ್ದಾನೆ. ಯಜ್ಞಗಳಲ್ಲಿ ಅರ್ಪಿಸಲು ಮಾಡುವ ಹಲವು ಹಾಲಿನ ಪದಾರ್ಥಗಳೂ ಕೂಡಾ ಪರಮಾತ್ಮ ಕೃಷ್ಣನೇ ಆಗಿರುವನು. ಅಗ್ನಿಯೂ ಕೃಷ್ಣ. ಏಕೆಂದರೆ ಅಗ್ನಿಯು ಪಂಚಭೂತಗಳಲ್ಲಿ ಒಂದು. ಈ ಕಾರಣದಿಂದ ಅಗ್ನಿಯನ್ನು ಕೃಷ್ಣನಿಂದ ಬೇರ್ಪಟ್ಟ ಶಕ್ತಿ ಎಂದು ಹೇಳಲಾಗಿದೆ. ಎಂದರೆ, ವೇದಗಳ ಕರ್ಮ ಭಾಗದಲ್ಲಿ ಹೇಳಿರುವ ವೈದಿಕ ಯಜ್ಞಗಳು ಒಟ್ಟಿನಲ್ಲಿ ಅವ...