Bengaluru, ಮಾರ್ಚ್ 12 -- ಅರ್ಥ: ವೇದಗಳಲ್ಲಿ ನಾನು ಸಾಮವೇದ, ದೇವತೆಗಳಲ್ಲಿ ನಾನು ಸ್ವರ್ಗರಾಜನಾದ ಇಂದ್ರ, ಇಂದ್ರಿಯಗಳಲ್ಲಿ ನಾನು ಮನಸ್ಸು, ಮತ್ತು ಜೀವಿಗಳಲ್ಲಿ ನಾನು ಚೇತನ.

ಭಾವಾರ್ಥ: ಜಡದ್ರವ್ಯಕ್ಕೂ ಚೇತನಕ್ಕೂ ಇರುವ ವ್ಯತ್ಯಾಸವೆಂದರೆ, ಜಡದ್ರವ್ಯಕ್ಕೆ ಜೀವಿಗಿರುವಂತೆ ಪ್ರಜ್ಞೆ ಇಲ್ಲ. ಆದ್ದರಿಂದ ಈ ಪ್ರಜ್ಞೆಯು ಪರಮವಾದದ್ದು, ನಿತ್ಯವಾದದ್ದು. ಜಡದ್ರವ್ಯದ ಸಂಘಟನೆಯೂ ಪ್ರಜ್ಞೆಯನ್ನು ಉತ್ಪತ್ತಿ ಮಾಡಲಾರದು.

ಇದನ್ನೂ ಓದಿ: Bhagavad Gita: ಆದಿ, ಮಧ್ಯ, ಅಂತ್ಯ ಎಲ್ಲವೂ ಪರಮಾತ್ಮನೇ; ಅವನೇ ಎಲ್ಲಾ ಜೀವಿಗಳ ಹೃದಯದಲ್ಲಿ ನೆಲೆಸಿದ್ದಾನೆ; ಗೀತೆಯ ತಾತ್ಪರ್ಯ ಹೀಗಿದೆ

ಅರ್ಥ: ರುದ್ರರಲ್ಲಿ ನಾನು ಶಿವ, ಯಕ್ಷರಾಕ್ಷಸರಲ್ಲಿ ನಾನು ಕುಬೇರ, ವಸುಗಳಲ್ಲಿ ನಾನು ಅಗ್ನಿ ಮತ್ತು ಪರ್ವತಗಳಲ್ಲಿ ನಾನು ಮೇರು.

ಭಾವಾರ್ಥ: ರುದ್ರರಲ್ಲಿ ಹನ್ನೊಂದು ಮಂದಿ. ಅವರಲ್ಲಿ ಶಂಕರ ಅಥವಾ ಶಿವನು ಪ್ರಧಾನ. ಅವನು ವಿಶ್ವದಲ್ಲಿನ ತಮೋಗುಣದ ಹೊಣೆಯನ್ನು ವಹಿಸಿಕೊಂಡಿರುವ ಪರಮ ಪ್ರಭುವಿನ ಅವತಾರ. ಯಕ್ಷರು ಮತ್ತು ರಾಕ್ಷಸರ ನಾಯಕ ಕುಬೇರ. ಅವನು ದೇವತ...