Bengaluru, ಮಾರ್ಚ್ 14 -- ಅರ್ಥ: ಆಯುಧಗಳಲ್ಲಿ ನಾನು ವಜ್ರಾಯುಧ, ಗೋವುಗಳಲ್ಲಿ ಸುರಭಿ, ಪ್ರಜೋತ್ಪತ್ತಿಗೆ ಕಾರಣಗಳಲ್ಲಿ ನಾನು ಕಂದರ್ಪ, ಪ್ರೇಮದೇವತೆ; ಸರ್ಪಗಳಲ್ಲಿ ನಾನು ವಾಸುಕಿ.

ಭಾವಾರ್ಥ: ವಜ್ರಾಯುಧ ಅಥವಾ ಸಿಡಿಲು ನಿಜವಾಗಿಯೂ ಬಲಶಾಲಿಯಾದದ್ದು. ಅದು ಕೃಷ್ಣನ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಆಧ್ಯಾತ್ಮಿಕ ಗಗನದಲ್ಲಿರುವ ಕೃಷ್ಣಲೋಕದಲ್ಲಿ, ಯಾವಾಗ ಕರೆದರೂ ಹಾಲು ಕೊಡುವ ಹಸುಗಳಿವೆ. ಅವು ಮನುಷ್ಯನು ಎಷ್ಟು ಬಯಸಿದರೆ ಅಷ್ಟು ಹಾಲನ್ನು ಕೊಡುತ್ತವೆ. ನಿಜ, ಇಂತಹ ಗೋವುಗಳು ಐಹಿಕ ಲೋಕದಲ್ಲಿ ಇಲ್ಲ. ಆದರೆ ಕೃಷ್ಣಲೋಕದಲ್ಲಿ ಅವುಗಳ ಪ್ರಸ್ತಾಪ ಇದೆ. ಪ್ರಭುವು ಇಂತಹ ಅನೇಕ ಗೋವುಗಳನ್ನು ಇಟ್ಟುಕೊಂಡಿದ್ದಾನೆ. ಅವುಗಳಿಗೆ ಸುರಭಿ ಎಂದು ಹೆಸರು. ಭಗವಂತನು ಸುರಭಿ ಗೋವುಗಳನ್ನು ನೋಡಿಕೊಳ್ಳುವುದರಲ್ಲಿ ನಿರತನಾಗಿರುತ್ತಾನೆ ಎಂದು ಹೇಳಲಾಗಿದೆ. ಕಂದರ್ಪ ಎಂದರೆ ಸತ್ಪುತ್ರರ ಪ್ರಾಪ್ತಿಗಾಗಿ ಇರುವ ಕಾಮಾಪೇಕ್ಷೆ. ಆದುದರಿಂದ ಕಂದರ್ಪನು ಕೃಷ್ಣನ ಪ್ರತಿನಿಧಿ. ಕೆಲವೊಮ್ಮೆ ಇಂದ್ರಿಯ ಸುಖಕ್ಕಾಗಿಯೇ ರತಿಕ್ರೀಡೆ ಆಡುವುದುಂಟು. ಇಂತಹ ರತಿಕ್...