Bengaluru, ಮಾರ್ಚ್ 13 -- ಅರ್ಥ: ಮಹರ್ಷಿಗಳಲ್ಲಿ ನಾನು ಭೃಗು, ಕಂಪನಗಳಲ್ಲಿ ನಾನು ದಿವ್ಯ ಓಂಕಾರ, ಯಜ್ಞಗಳಲ್ಲಿ ನಾನು ಜಪಯಜ್ಞ, ಚಲಿಸದ ವಸ್ತುಗಳಲ್ಲಿ ನಾನು ಹಿಮಾಲಯ.

ಭಾವಾರ್ಥ: ವಿಶ್ವದ ಪ್ರಥಮ ಜೀವಿಯಾದ ಬ್ರಹ್ಮನು ವಿವಿಧ ವರ್ಗಗಳ ಸಂತಾನ ಪ್ರಸಾರಕ್ಕಾಗಿ ಹಲವರು ಪುತ್ರರನ್ನು ಸೃಷ್ಟಿಸಿದನು. ಈ ಗಂಡು ಮಕ್ಕಳಲ್ಲಿ ಭ್ರಗುವು ಅತ್ಯಂತ ಶಕ್ತ ಋಷಿ ಎಲ್ಲ ದಿವ್ಯಮಂತ್ರಗಳಲ್ಲಿ ಓಂಕಾರವು ಕೃಷ್ಣನ ಪ್ರತಿನಿಧಿ. ಎಲ್ಲ ಯಜ್ಞಗಳಲ್ಲಿ ಅತ್ಯಂತ ಸರಳವಾದದ್ದು ಮತ್ತು ಅತ್ಯಂತ ಪರಿಶುದ್ಧವಾದದ್ದು ನನ್ನ ಜಪ. ಲೋಕಗಳಲ್ಲಿ ಭವ್ಯವಾದದ್ದೆಲ್ಲ ಕೃಷ್ಣನ ಪ್ರತಿನಿಧಿ. ಆದುದರಿಂದ ಪ್ರಪಂಚದಲ್ಲಿ ಅತಿದೊಡ್ಡ ಪರ್ವತವಾದ ಹಿಮಾಲಯವು ಅವನ ಪ್ರತಿನಿಧಿ. ಹಿಂದಿನ ಶ್ಲೋಕದಲ್ಲಿ ಮೇರುಪರ್ವತವನ್ನು ಹೆಸರಿಸಲಾಗಿತ್ತು. ಆದರೆ ಮೇರುವು ಒಮ್ಮೊಮ್ಮೆ ಚಲಿಸುತ್ತದೆ. ಮೇರುಪರ್ವತಕ್ಕಿಂತ ಶ್ರೇಷ್ಠವಾದದ್ದು ಹಿಮಾಲಯ ಪರ್ವತ.

ಇದನ್ನೂ ಓದಿ: ಹೋಳಿ ದಿನವೇ ಬುಧ-ಶುಕ್ರ ಸಂಯೋಗ; 3 ರಾಶಿಯವರಿಗೆ ಅದೃಷ್ಟ, ಉದ್ಯೋಗದಲ್ಲಿ ಬಡ್ತಿ ಜೊತೆಗೆ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ...