Bengaluru, ಮಾರ್ಚ್ 22 -- ಅರ್ಥ: ಅರ್ಜುನನು ಹೀಗೆ ಹೇಳಿದನು - ನೀನು ಅನುಗ್ರಹ ಮಾಡಿ ಈ ರಹಸ್ಯವಾದ ಆಧ್ಯಾತ್ಮಿಕ ವಿಷಯಗಳನ್ನು ಕುರಿತು ಉಪದೇಶ ಮಾಡಿದೆ. ಇದರಿಂದ ನನ್ನ ಮೋಹವು ನಾಶವಾಗಿದೆ.

ಭಾವಾರ್ಥ: ಕೃಷ್ಣನು ಎಲ್ಲ ಕಾರಣಗಳ ಕಾರಣ ಎನ್ನುವುದನ್ನು ಈ ಅಧ್ಯಾಯವು ತೋರಿಸುತ್ತದೆ. ಭೌತಿಕ ಲೋಕಗಳು ಮಹಾ ವಿಷ್ಣುವಿನಿಂದ ಹೊರಸೂಸುತ್ತವೆ; ಮಹಾವಿಷ್ಣುವಿಗೆ ಸಹ ಕೃಷ್ಣನು ಕಾರಣನು. ಕೃಷ್ಣನು ಒಂದು ಅವತಾರವಲ್ಲ; ಅವನು ಎಲ್ಲ ಅವತಾರಗಳ ಮೂಲ. ಹಿಂದಿನ ಅಧ್ಯಾಯದಲ್ಲಿ ಇದನ್ನು ಸಂಪೂರ್ಣವಾಗಿ ವಿವರಿಸಿದೆ. ಈಗ ಅರ್ಜುನನ ಮಟ್ಟಿಗೆ ಅವನು ತನ್ನ ಮೋಹವು ಕೊನೆಗಂಡಿತು ಎಂದು ಹೇಳುತ್ತಾನೆ. ಎಂದರೆ ಈಗ ಅರ್ಜುನನು ಕೃಷ್ಣನು ಕೇವಲ ಒಬ್ಬ ಮನುಷ್ಯ, ತನ್ನ ಸ್ನೇಹಿತ ಎಂದು ಯೋಚಿಸುವುದಿಲ್ಲ; ಅವನು ಎಲ್ಲ ವಸ್ತುಗಳ ಮೂಲ ಎಂದು ಕಾಣುತ್ತಾನೆ. ಅರ್ಜುನನಿಗೆ ಬಹುಮಟ್ಟಿಗೆ ಜ್ಞಾನೋದಯವಾಗಿದೆ. ತನಗೆ ಕೃಷ್ಣನಂತಹ ಮಹಾನ್ ಸ್ನೇಹಿತನಿದ್ದಾನೆ ಎಂದು ಅವನಿಗೆ ಸಂತೋಷ, ಆದರೆ ತಾನು ಕೃಷ್ಣನನ್ನು ಎಲ್ಲ ವಸ್ತುಗಳ ಮೂಲ ಎಂದು ಒಪ್ಪಿಕೊಂಡರೂ ಇತರರು ಒಪ್ಪಿಕೊಳ್ಳದೆ ಹ...