Bengaluru, ಮಾರ್ಚ್ 3 -- ಅರ್ಥ: ಎಲ್ಲ ಆಧ್ಯಾತ್ಮಿಕ ಮತ್ತು ಭೌತಿಕ ಜಗತ್ತುಗಳ ಮೂಲವು ನಾನೇ. ಎಲ್ಲವೂ ನನ್ನಿಂದ ಹೊರಸೂಸುತ್ತದೆ. ಇದನ್ನು ಸಂಪೂರ್ಣವಾಗಿ ತಿಳಿದ ವಿದ್ವಾಂಸರು ನನ್ನ ಭಕ್ತಿಸೇವೆಯಲ್ಲಿ ನಿರತರಾಗುತ್ತಾರೆ ಮತ್ತು ಹೃದಯತುಂಬಿ ನನ್ನನ್ನು ಪೂಜಿಸುತ್ತಾರೆ.

ಭಾವಾರ್ಥ: ವೇದಗಳನ್ನು ಪರಿಪೂರ್ಣವಾಗಿ ಅಧ್ಯಯನ ಮಾಡಿ ಚೈತನ್ಯ ಮಹಾಪ್ರಭುಗಳಂತಹ ಅಚಾರ್ಯರಿಂದ ತಿಳುವಳಿಕೆ ಪಡೆದು ಈ ಬೋಧನೆಗಳನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ತಿಳಿದುಕೊಂಡ ಪ್ರಗಲ್ಪ ವಿದ್ವಾಂಸನು, ಕೃಷ್ಣನು ಐಹಿಕ ಮತ್ತು ಆಧ್ಯಾತ್ಮಿಕ ಪ್ರಪಂಚಗಳಲ್ಲಿ ಇರುವುದೆಲ್ಲಕ್ಕೂ ಮೂಲ ಎನ್ನುವುದನ್ನು ಅರ್ಥಮಾಡಿಕೊಳ್ಳಬಲ್ಲ. ಇದನ್ನು ಪರಿಪೂರ್ಣವಾಗಿ ತಿಳಿದುಕೊಂಡದ್ದರಿಂದ ಅವನು ಪರಮ ಪ್ರಭುವಿನ ಭಕ್ತಿಸೇವೆಯಲ್ಲಿ ಸ್ಥಿತನಾಗಿದ್ದಾನೆ.

ಎಷ್ಟೇ ಪ್ರಮಾಣದ ಅಸಂಬದ್ಧ ವ್ಯಾಖ್ಯಾನಗಳಿಂದಾಗಲೀ, ಮೂರ್ಖರಿಂದಾಗಲೀ ಅವನು ಅತ್ತಿತ್ತ ಚಲಿಸುವುದಿಲ್ಲ. ಬ್ರಹ್ಮ, ಶಿವ ಮತ್ತು ಇತರ ಎಲ್ಲ ದೇವತೆಗಳ ಮೂಲ ಕೃಷ್ಣನೇ ಎಂದು ಎಲ್ಲ ವೈದಿಕ ಸಾಹಿತ್ಯದಲ್ಲಿ ಒಮ್ಮತವಿದೆ. ಅಥರ್ವಣ ವೇದದಲ...