Bengaluru, ಮಾರ್ಚ್ 11 -- ಅರ್ಥ: ಅರ್ಜುನಾ, ನಾನು ಎಲ್ಲ ಜೀವಿಗಳ ಹೃದಯದಲ್ಲಿ ನೆಲೆಸಿರುವ ಪರಮಾತ್ಮ. ಎಲ್ಲ ಜೀವಿಗಳ ಆದಿ, ಮಧ್ಯ ಮತ್ತು ಅಂತ್ಯವು ನಾನು.

ಭಾವಾರ್ಥ: ಈ ಶ್ಲೋಕದಲ್ಲಿ ಅರ್ಜುನನನ್ನು ಗುಡಾಕೇಶ ಎಂದು ಸಂಬೋಧಿಸಿದೆ. ಹೀಗೆಂದರೆ ನಿದ್ರೆಯ ತಮಸ್ಸನ್ನು ಗೆದ್ದವನು. ಅಜ್ಞಾನದ ಕತ್ತಲೆಯೊಳಗೆ ನಿದ್ರಿಸುತ್ತಿರುವವರಿಗೆ ದೇವೋತ್ತಮ ಪರಮ ಪುರುಷನು ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳಲ್ಲಿ ಹೇಗೆ ತನ್ನನ್ನು ಪ್ರಕಟಮಾಡಿಕೊಳ್ಳುತ್ತಾನೆ ಎಂದು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ ಕೃಷ್ಣನು ಇಲ್ಲಿ ಅರ್ಜುನನನ್ನು ಸಂಬೋಧಿಸುವ ರೀತಿಯು ಅರ್ಥವತ್ತಾದದ್ದು. ಅರ್ಜುನನು ಇಂತಹ ಕತ್ತಲೆಯನ್ನು ಮೀರಿದವನಾದುದರಿಂದ ದೇವೋತ್ತಮ ಪರಮ ಪುರುಷನು ತನ್ನ ವಿವಿಧ ಶಕ್ತಿಗಳನ್ನು ವರ್ಣಿಸಲು ಒಪ್ಪುತ್ತಾನೆ.

ತನ್ನ ಪ್ರಥಮ ವಿಸ್ತರಣೆಯಿಂದಾಗಿ ತಾನು ಇಡೀ ವಿಶ್ವದ ಅಭಿವ್ಯಕ್ತಿಗೆ ಆತ್ಮನು ಎಂದು ಕೃಷ್ಣನು ಮೊದಲು ಅರ್ಜುನನಿಗೆ ಹೇಳುತ್ತಾನೆ. ಐಹಿಕ ಸೃಷ್ಟಿಗೆ ಮೊದಲು ಪರಮ ಪ್ರಭುವು ಸ್ವಾಂಶ ವಿಸ್ತರಣೆಯಿಂದ ಪುರುಷಾವತಾರಗಳನ್ನು ಸ್ವ...