Bengaluru, ಮಾರ್ಚ್ 25 -- ಮನೆ ಎಂದರೆ ಅದು ಮನಸ್ಸು, ದೇಹವನ್ನು ಆರಾಮದಾಯಕವಾಗಿ, ಶಾಂತಿಯುತವಾಗಿ ಇರಿಸುವ ಸ್ಥಳ. ಹೊರಗಡೆ ಹೋಗಿ ಮನೆಗೆ ಬಂದಾಗ, ಆಹಾ ಮನೆಗೆ ಬಂದೆ ಎನ್ನಿಸಬೇಕೇ ಹೊರತು, ಅಯ್ಯೋ ಯಾಕೆ ಬಂದೆ ಎನ್ನಿಸಬಾರದು. ಅಂತಹ ಅಹ್ಲಾದಕರ ಅನುಭವ ಪಡೆಯಲು ಮನೆಯನ್ನು ನಾವು ಹೇಗೆ ಇರಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಹಾಗೆ ಆಗಬೇಕು ಎಂದಾದರೆ, ನೀವು ಮನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕಾಗುತ್ತದೆ, ಜತೆಗೆ ಸ್ವಚ್ಛ ಮತ್ತು ಶುಭ್ರ ಮನೆ ಇದ್ದರೆ, ಮನಸ್ಸು ಮತ್ತು ಆರೋಗ್ಯದ ಮೇಲೂ ಸಕಾರಾತ್ಮಕ ಪ್ರಯೋಜನ ಬೀರುತ್ತದೆ.

ಸುವಾಸನೆಯುಕ್ತ ಮನೆ ತಾಜಾ ವಾತಾವರಣವನ್ನು ಸೃಷ್ಟಿಸುವುದಲ್ಲದೆ, ಮನೆಯ ಸದಸ್ಯರ ಮೂಡ್ ಅನ್ನು ಸುಧಾರಿಸಲು, ಒತ್ತಡಮುಕ್ತವಾಗಿರಲು ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆ ಅಥವಾ ಕಚೇರಿಯಲ್ಲಿ ಸುಗಂಧವನ್ನು ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಬೇಕಾದಷ್ಟು ಉತ್ಪನ್ನಗಳು ಲಭ್ಯವಿದ್ದರೂ ನೈಸರ್ಗಿಕವಾಗಿ ಲಭ್ಯವಿರುವ ಉತ್ಪನಗಳನ್ನೂ ಬಳಸಿ ಮನೆಯನ್ನು ತಾಜಾವಾಗಿ ಇರಿಸಬಹುದು. ಹೇಗೆ ಎಂಬುದು ಇಲ್ಲ...