ಭಾರತ, ಮಾರ್ಚ್ 8 -- ಇಂದು (ಮಾರ್ಚ್‌ 8) ಅಂತಾರಾಷ್ಟ್ರೀಯ ಮಹಿಳಾ ದಿನ. ಮಹಿಳೆಯ ಶಕ್ತಿ, ಪ್ರತಿಭೆಯನ್ನು ತೋರಿಸುವಂತಹ ಅನೇಕ ಸಿನಿಮಾಗಳು ಬಾಲಿವುಡ್‌ನಲ್ಲಿ ಬಂದಿವೆ. ಕ್ವೀನ್‌, ತಪ್ಪಡ್‌, ಲಾಪತಾ ಲೇಡಿಸ್‌, ಇಂಗ್ಲಿಷ್‌ ವಿಂಗ್ಲಿಷ್‌, ರಾಜಿ, ಮೇರಿಕೋಮ್‌ನಂತಹ ಸಿನಿಮಾಗಳು ನಿಮಗೆ ಸ್ಪೂರ್ತಿ ತುಂಬಬಲ್ಲದು.

ವಿವಿಧ ಮಹಿಳಾ ಪ್ರಧಾನ ಸಿನಿಮಾಗಳನ್ನು ನೋಡುತ್ತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಬಯಸುವವರಿಗೆ ಇಲ್ಲಿ ಐದು ಬಾಲಿವುಡ್‌ ಸಿನಿಮಾಗಳ ವಿವರ ನೀಡಲಾಗಿದೆ. ಕ್ವೀನ್‌, ತಪ್ಪಡ್‌, ಲಾಪತಾ ಲೇಡಿಸ್‌, ಇಂಗ್ಲಿಷ್‌ ವಿಂಗ್ಲಿಷ್‌, ರಾಜಿ, ಮೇರಿಕೋಮ್‌ನಂತಹ ಸಿನಿಮಾಗಳು ನಿಮಗೆ ಸ್ಪೂರ್ತಿ ತುಂಬಬಲ್ಲದು. ಈ ಸಿನಿಮಾಗಳನ್ನು ಒಂದಲ್ಲ ಹಲವು ಬಾರಿ ನೋಡಬಹುದು. ಸಿನಿಮಾ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದಿರುವ ಈ ಐದು ಸಿನಿಮಾಗಳ ಕುರಿತು ವಿವರ ಪಡೆಯೋಣ ಬನ್ನಿ.

ರಾಣಿ ಎಂಬ ಮಹಿಳೆಯ ಕಥೆಯಿದು. ಮದುವೆಗೆ ಒಂದು ದಿನ ಮೊದಲು ತನ್ನ ನಿಶ್ಚಿತಾರ್ಥ ಮಾಡಿಕೊಂಡ ವ್ಯಕ್ತಿ ಬಿಟ್ಟು ಹೋದ ನಂತರ ರಾಣಿ ಆಘಾತಗೊಳ್ಳುತ್ತಾಳೆ. ಆದರ...