ಭಾರತ, ಫೆಬ್ರವರಿ 25 -- ಐಐಟಿಗಳಲ್ಲಿ ಜನಪ್ರಿಯವಾಗಿರುವ ಟಾಪ್ 5 ಬಿಟೆಕ್ ಕೋರ್ಸ್‌ಗಳು: ನೀವು ಜೆಇಇ ಮೇನ್ಸ್‌ 2025 ಅಟೆಂಡ್ ಆಗ್ತಾ ಇದ್ದೀರಾ, 12ನೇ ತರಗತಿ ಮುಗಿಸಿ ಇಂಜಿನಿಯರಿಂಗ್ ಮಾಡಲು ಬಯಸುತ್ತಿದ್ದರೆ, ಸರಿಯಾಗಿ ಶಿಕ್ಷಣದ ಯೋಜನೆ ರೂಪಿಸಿಕೊಳ್ಳಿ, ಎಂಜಿನಿಯರಿಂಗ್ ಮಾಡುತ್ತೀರಾದರೆ, ಯಾವ ಶಾಖೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ. ಜೆಇಇ ಮೇನ್ಸ್‌ ಟಾಪರ್‌ಗಳು ಐಐಟಿಗಳಲ್ಲಿ ಹೆಚ್ಚು ಆಯ್ಕೆ ಮಾಡುವ ಬಿಟೆಕ್‌ ಕೋರ್ಸ್‌ಗಳು ಯಾವುವು ಎಂದು ತಿಳಿದಿಕೊಳ್ಳಿ. ಅಂತಹ 5 ಟಾಪ್ ಬಿಟೆಕ್ ಕೋರ್ಸ್‌ಗಳ ವಿವರ ಇಲ್ಲಿದೆ

ಕಂಪ್ಯೂಟರ್ ಸೈನ್ಸ್ ಆಂಡ್ ಎಂಜಿನಿಯರಿಂಗ್‌: ಅತಿ ಹೆಚ್ಚು ಬೇಡಿಕೆಯಲ್ಲಿರುವ ಎಂಜಿನಿಯರಿಂಗ್ ಶಾಖೆಗಳಲ್ಲಿ ಇದುವೇ ಮುಖ್ಯವಾದುದು. ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ನ ಅಭಿವೃದ್ಧಿ, ಪರೀಕ್ಷೆ, ಅನುಷ್ಠಾನ ಮತ್ತು ನಿರ್ವಹಣೆ ಮಾಡುವ ಹೊಣೆಗಾರಿಕೆ ಕಂಪ್ಯೂಟರ್ ಎಂಜಿನಿಯರ್‌ಗಳದ್ದು. ದತ್ತಾಂಶ ವಿಜ್ಞಾನ, ಇಂಟೆಲಿಜೆಂಟ್ ಬೋಟ್ ಮತ್ತು ಕ್ಲೌಡ್ ಡೇಟಾ ತಂತ್ರಜ್ಞಾನದ ನಿರಂತರ ಅಭಿವೃದ್ಧಿಯೊಂದಿಗೆ, ಕಂಪ್ಯೂಟರ...