ಭಾರತ, ಏಪ್ರಿಲ್ 1 -- Best Dosa Chutney: ಬಿಸಿಬಿಸಿ ದೋಸೆ ಚಟ್ನಿ ಯಾರಿಗೆ ಬೇಡ ಹೇಳಿ. ಬಿಸಿಬಿಸಿ ದೋಸೆ ಅಂತ ಹೇಳಿದ ಕೂಡಲೇ ನೆನಪಾಗುವ ನಗರ ಯಾವುದು, ಬೆಂಗಳೂರು, ಮೈಸೂರು, ಮಂಗಳೂರು. ಹೌದು ಕರ್ನಾಟಕದಲ್ಲಿ ನಮಗೆ ಪ್ರತಿ ಊರು ಕೂಡ ಒಂದೊಂದು ದೋಸೆಗೆ ಹೆಸರುವಾಸಿ. ಇರಲಿ. ವಿಷಯ ಏನಪ್ಪಾ ಅಂದ್ರೆ, ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ನಿನ್ನೆಯಿಂದ ದೋಸೆಯ ಬಗ್ಗೆಯೇ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಭಾರತದಲ್ಲಿ ಯಾವ ನಗರದಲ್ಲಿ ಬೆಸ್ಟ್ ದೋಸೆ ಚಟ್ನಿ ಸಿಗುತ್ತದೆ? ಬೆಂಗಳೂರಲ್ಲಾ, ಹೈದರಾಬಾದ್‌ನಲ್ಲಾ ಅಥವಾ ಚೆನ್ನೈನಲ್ಲಾ? ನಿಮ್ಮ ಅಭಿಪ್ರಾಯ ಏನು? ನೀವು ಕೂಡ ಈ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಅದಕ್ಕೂ ಮೊದಲು ಈ ವರದಿಯನ್ನೊಮ್ಮೆ ಓದಿಕೊಳ್ಳಿ.

ತಿಂಡಿ-ತಿನಿಸುಗಳ ಬಗ್ಗೆ ಚರ್ಚೆ ನಡೆಯುವುದು ಸಾಮಾನ್ಯ. ಹಾಗೆ ಇದು ದೋಸೆ ಕುರಿತು ಸಮರ. ಭಾರತದಲ್ಲಿ ದೋಸೆಗೆ ಯಾವ ನಗರ ಬೆಸ್ಟ್ ಎಂಬ ವಿಷಯ ನಿನ್ನೆಯಿಂದ ಚರ್ಚೆಗೆ ಒಳಗಾಗಿದೆ. ಬೆಂಗಳೂರು ಮಸಾಲೆ ದೋಸೆ, ಆಂಧ್ರ ಪ್ರದೇಶ ಹೈದರಾಬಾದ್‌ನ ಮಸಾಲೆಯುಕ್ತ ದೋಸೆ, ಚೆನ್ನೈನ ಗರಿಗರಿ ದೋ...