ಭಾರತ, ಮಾರ್ಚ್ 18 -- ಬೆಂಗಳೂರು: ಹೆಚ್ಚಾದ ಬಿಸಿಲಿನ ಶಾಖದ ನಡುವೆ ಬೆಲೆ ಏರಿಕೆಯ ಬಿಸಿಯೂ ಬೆಂಗಳೂರಿಗರಿಗೆ ತಟ್ಟುತ್ತಿದೆ. ಕಳೆದೊಂದು ದಶಕದಿಂದ ಬದಲಾಗದ ನೀರಿನ ದರ ಇದೀಗ ಏರಿಕೆಯಾಗಿದೆ. ಲೀಟರ್‌ಗೆ 1 ಪೈಸೆಯಷ್ಟು ಏರಿಕೆ ಮಾಡುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. 11 ವರ್ಷಗಳ ನಂತರ ಬೆಂಗಳೂರು ಜಲಮಂಡಳಿಯು ನೀರಿನ ದರವನ್ನು ಹೆಚ್ಚಳ ಮಾಡುತ್ತಿದೆ. ಬಿಬಿಎಂಪಿ ಬಜೆಟ್‌ಗೆ ಮುಂಚಿತವಾಗಿ ಬೆಂಗಳೂರಿನ ಶಾಸಕರೊಂದಿಗಿನ ಸಭೆಯ ನಂತರ ಹೊಸ ದರ ಅಧಿಕೃತವಾಗಿ ಜಾರಿಗೊಳ್ಳುವ ನಿರೀಕ್ಷೆ ಇದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಆರಂಭದಲ್ಲಿ ತನ್ನ ಹೆಚ್ಚುತ್ತಿರುವ ನಷ್ಟವನ್ನು ಸರಿದೂಗಿಸಲು ಲೀಟರ್‌ಗೆ 7 ರಿಂದ 8 ಪೈಸೆಯಷ್ಟು ದರ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿತ್ತು. ಆದರೆ ಈ ವಿಚಾರವಾಗಿ ಮಧ್ಯೆ ಪ್ರವೇಶಿಸಿದ ಡಿಕೆ ಶಿವಕುಮಾರ್ ನೀರಿನ ದರ ಅಷ್ಟೊಂದು ಏರಿಕೆ ಮಾಡುವುದು ಸಮಂಜಸವಲ್ಲ ಎಂದಿದ್ದಾರೆ. 'ಕಳೆದ ಕೆಲವು ದಿನಗಳ ಹಿಂದೆ ಬಿಡ್ಬ್ಲೂಎಸ್‌ಎಸ್‌ಬಿ ಅಧಿಕಾರಿಗಳು ನೀರಿನ ಸುಂಕವನ್ನು 7 ರಿಂದ...