Bengaluru, ಏಪ್ರಿಲ್ 3 -- Bengaluru rains: ಬೆಂಗಳೂರು ನಗರದಲ್ಲಿ ಕಳೆದ ಕೆಲವು ವಾರಗಳಿಂದ ಗರಿಷ್ಠ ತಾಪಮಾನ, ಸುಡುಬಿಸಲು ಅನುಭವಿಸಿದ್ದ ಬೆಂಗಳೂರಿಗರಿಗೆ ಇಂದು ಸುರಿದ ಮಳೆ ಕೊಂಚ ಸಮಾಧಾನವನ್ನು ತಂದುಕೊಟ್ಟಿತು. ವಾತಾವರಣ ತಂಪಾದ ಅನುಭವಕೊಟ್ಟಿತು. ಬೆಂಗಳೂರು ನಗರದ ಸುತ್ತಮುತ್ತ ಗುರುವಾರ ಪೂರ್ವಾಹ್ನ ಸಾಧಾರಣ ಮಳೆಯಾಗಿದ್ದು, ವಿವಿಧೆಡೆ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಬೆಂಗಳೂರು ಸಂಚಾರ ಪೊಲೀಸರು ವಿವಿಧೆಡೆ ಸಂಚಾರ ವ್ಯತ್ಯಯದ ಸಲಹೆಗಳನ್ನೂ ನೀಡಿರುವುದು ಗಮನಸೆಳೆಯಿತು.

ಬೆಂಗಳೂರು ಸಂಚಾರ ಪೊಲೀಸರು ಅನೇಕ ಸಲಹೆಗಳನ್ನು ನೀಡಿದ್ದು, ರಸ್ತೆಗಳಲ್ಲಿ ನೀರು ನಿಂಥ ಕಾರಣಿ ನಗರದ ಹಲವಾರು ಭಾಗಗಳಲ್ಲಿ ನಿಧಾನಗತಿಯ ವಾಹನ ಸಂಚಾರ ಇರುವ ಬಗ್ಗೆ ಪ್ರಯಾಣಿಕರನ್ನು ಎಚ್ಚರಿಸಿದ್ದಾರೆ. ಹೊರ ವರ್ತುಲ ರಸ್ತೆ, ವಿಶೇಷವಾಗಿ ಮಾರತ್ತಹಳ್ಳಿ ವ್ಯಾಪ್ತಿಯಲ್ಲಿ, ಹೆಚ್ಚು ಸಮಸ್ಯೆ ಕಂಡುಬಂತು. ಇಕೋಸ್ಪೇಸ್ ಬಳಿ ವಾಟರ್‌ಲಾಗಿಂಗಿಂಗ್‌ನಿಂದಾಗಿ ವಾಹನಗಳು ನಿಧಾನವಾಗಿ ಚಲಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ಧಾರೆ....