ಭಾರತ, ಮಾರ್ಚ್ 5 -- Bengaluru Pollution: ಬಿಎಂಆರ್‌ಸಿಎಲ್‌ ಬೆಂಗಳೂರು ಮೆಟ್ರೋ ಟಿಕೆಟ್ ದರವನ್ನು ಫೆ 9 ರಂದು ಏರಿಸಿ ಜಾರಿಗೊಳಿಸಿದ ಬಳಿಕ ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಇಳಿಕೆಯಾಗಿದೆ. ರಸ್ತೆ ಸಾರಿಗೆ ಬಳಕೆ ಹೆಚ್ಚಾಗಿದೆ. ಸದ್ಯದ ಲೆಕ್ಕಾಚಾರ ಪ್ರಕಾರ, ನಮ್ಮ ಮೆಟ್ರೋ ನಿತ್ಯ ಪ್ರಯಾಣಿಕರ ಪೈಕಿ 80,000 ದಿಂದ 90,000 ದಷ್ಟು ಜನ ರಸ್ತೆ ಸಾರಿಗೆ ಕಡೆಗೆ ಹೊರಳಿದ್ದಾರೆ. ಈ ನಡುವೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಆವರಣದಲ್ಲಿರುವ ನ್ಯಾಷನಲ್ ಏರ್ ಕ್ವಾಲಿಟಿ ಮಾನಿಟರಿಂಗ್ ಸೆಂಟರ್ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಮಾಲಿನ್ಯ ಮಟ್ಟ ಏರಿಕೆಯಾಗಿದೆ.

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್‌) ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಬಳಿಕ ಪ್ರಯಾಣಿಕರ ಸಂಖ್ಯೆ ಇಳಿಕೆಯಾದುದನ್ನು ಅಧಿಕೃತವಾಗಿಯೇ ಒಪ್ಪಿಕೊಂಡಿದೆ. ಈ ಕುರಿತು ಮಾತನಾಡಿರುವ ಬಿಎಂಆರ್‌ಸಿಎಲ್‌ ವಕ್ತಾರ ಯಶವಂತ ಚವಾಣ್‌, "ನಮ್ಮ ಮೆಟ್ರೋ ರೈಲಿನ ದೈನಿಕ ಪ್ರಯಾಣಿಕರ ಸಂಖ್ಯೆಯಲ್ಲಿ...