ಭಾರತ, ಏಪ್ರಿಲ್ 5 -- ಹಾಲು, ಮೊಸರಿನ ದರ ಹೆಚ್ಚಳದಿಂದಾಗಿ ಬೆಂಗಳೂರಿನ ಹೋಟೆಲ್‌ಗಳಲ್ಲಿ ಚಹಾ, ಕಾಫಿ ಸೇರಿದಂತೆ ಹಾಲಿನ ಎಲ್ಲಾ ಉತ್ಪನ್ನಗಳ ಬೆಲೆಯೂ ಏರಿಕೆಯಾಗಲಿದೆ. ಹಾಲಿನ ದರ ಏರಿಕೆ ಆದಂತೆಲ್ಲ ಹೊಟೇಲ್‌ನಲ್ಲಿ ಕೆಲ ತಿಂಡಿಗಳ ಬೆಲೆಯೂ ಏರಿಕೆ ಆಗುತ್ತದೆ. ಹಾಲಿನಿಂದಲೇ ಮಾಡುವ ಕಾಫಿ, ಟೀಗಳ ಬೆಲೆಯಂತೂ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಲಿನ ದರ ಹೆಚ್ಚಾದಂತೆಲ್ಲ ಹೋಟೆಲ್‌ ಉದ್ಯಮಕ್ಕೆ ಹೊಡೆತ ಬೀಳುತ್ತದೆ. ಅಷ್ಟೇ ಅಲ್ಲ ಜನ ಸಾಮಾನ್ಯರಿಗೂ ತಿಂಡಿ ತಿನಿಸುಗಳ ಬೆಲೆ ಏರಿಕೆ ತೊಂದರೆ ತಪ್ಪಿದ್ದಲ್ಲ. ಕರ್ನಾಟಕ ಸರ್ಕಾರ ಹಾಲಿನ ದರ 4 ರೂಪಾಯಿ ಹೆಚ್ಚು ಮಾಡಿದಾಗಿನಿಂದ ಹೊಟೇಲ್ ಮಾಲಿಕರು ಟಿ, ಕಾಫಿ ಬೆಲೆ ಏರಿಕೆ ಮಾಡಲು ನಿರ್ಧರಿಸಿದ್ದರು.

ಹಾಲಿನ ಬೆಲೆ 4 ರೂ ಹೆಚ್ಚಾದರೆ ಟಿ, ಕಾಫಿಗಳ ಬೆಲೆಯನ್ನು 5 ರೂ ವರೆಗೆ ಏರಿಕೆ ಮಾಡಲು ಹೋಟೆಲ್ ಮಾಲಿಕರು ಯೋಚಿಸಿದಂತಿದೆ. ಸದ್ಯ ನಗರದಲ್ಲಿ ಟೀ, ಕಾಫಿ ಬೆಲೆ 15- 20ರೂ ಇದೆ. ಇದನ್ನು ಎಷ್ಟರ ಪ್ರಮಾಣದಲ್ಲಿ ಏರಿಕೆ ಮಾಡಬಹುದು ಎಂಬ ಬಗ್ಗೆ ಬೆಂಗಳೂರು ಹೋಟೆಲ್‌ಗಳ ಸಂಘ, ಕರ್ನಾಟಕ ಹೋಟ...