ಭಾರತ, ಮಾರ್ಚ್ 5 -- Bengaluru Metro: ಬೆಂಗಳೂರು ಮೆಟ್ರೋ ಟಿಕೆಟ್ ದರವನ್ನು ಫೆ 9 ರಂದು ಏರಿಕೆ ಮಾಡಿದ ಬಳಿಕ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿರುವುದು ಈಗ ಬಹುಚರ್ಚಿತ ವಿಚಾರ. ಬೆಂಗಳೂರು ಮೆಟ್ರೋ ರೈಲ್‌ ಕಾರ್ಪೊರೇಶನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಅಧಿಕಾರಿಗಳು ಕೂಡ ಇದನ್ನು ಧೃಡೀಕರಿಸಿದ್ದಾರೆ. ಫೆಬ್ರವರಿ 2ನೇ ವಾರದಿಂದೀಚೆಗೆ ನಮ್ಮ ಮೆಟ್ರೋ ದೈನಿಕ ಪ್ರಯಾಣಿಕರ ಸಂಖ್ಯೆ ಶೇಕಡ 13 ರಷ್ಟು ಇಳಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಗಿಂತ ಮೊದಲು ಒಂದು ತಿಂಗಳು ವಾರದ ದಿನಗಳಲ್ಲಿ ಸರಾಸರಿ 8.5 ಲಕ್ಷ ಪ್ರಯಾಣಿಕರು ನಮ್ಮ ಮೆಟ್ರೋ ರೈಲು ಬಳಸುತ್ತಿದ್ದರು. ಟಿಕೆಟ್ ದರ ಏರಿಕೆ ಬಳಿಕ ದೈನಿಕ ಪ್ರಯಾಣಿಕರ ಸಂಖ್ಯೆ 2.5 ಲಕ್ಷದಿಂದ 3 ಲಕ್ಷದಷ್ಟು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.

ಬಿಎಂಆರ್‌ಸಿಎಲ್‌ ನಮ್ಮ ಮೆಟ್ರೊ ಮಾಸಿಕ ಪಾಸ್ ಆಯ್ಕೆಗಳನ್ನು ಒದಗಿಸದ ಕಾರಣ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯ ಪರ್ಯಾಯ ಆಯ್ಕೆಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿ ಮೊದಲಾರ್ಧದಲ್ಲಿ ಮೆಟ್ರೊ...