ಭಾರತ, ಫೆಬ್ರವರಿ 1 -- ರೆಡ್ಡಿಟ್‌ ತಾಣದಲ್ಲಿ ವ್ಯಕ್ತಿಯೊಬ್ಬರು ಬೆಂಗಳೂರಿನ ಅನುಭವನ್ನು ಬರೆದಿದ್ದಾರೆ. ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ರ್‍ಯಾಪಿಡೋ ರೈಡ್‌ ಬುಕ್‌ ಮಾಡಿದ್ದರು. ಪ್ರಯಾಣದ ಸಮಯದಲ್ಲಿ ಚಾಲಕನೊಂದಿಗೆ ಮಾತನಾಡಿದ್ದಾರೆ ಈ ಸಮಯದಲ್ಲ ಆ ಚಾಲಕ "ನೀವು ಎಲ್ಲಿ ಕೆಲಸ ಮಾಡುವುದು, ಐಟಿಯ ಯಾವ ವಿಭಾಗದಲ್ಲಿ ಕೆಲಸ ಮಾಡುವುದು?" ಎಂದೆಲ್ಲ ಕೇಳಿದಾಗ ಅಚ್ಚರಿಯಾಯಿತು ಎಂದು ಬರೆದಿದ್ದಾರೆ. ಬಳಿಕ ಆ ಚಾಲಕ ಈ ಹಿಂದೆ ಎಂಜಿನಿಯರ್‌ ಆಗಿದ್ದರು ಎಂಬ ವಿಷಯವನ್ನು ತಿಳಿದುಕೊಂಡಿದ್ದಾರೆ.

"ರ್‍ಯಾಪಿಡೋದಲ್ಲಿ ಪ್ರಯಣಿಸುವಾಗ ಚಾಲಕನ ಜತೆ ಮಾತನಾಡಿದೆ. ಆತ ರ್‍ಯಾಪಿಡೋ ಚಾಲಕನಾಗುವ ಮೊದಲು ಏನು ಮಾಡುತ್ತಿದ್ದ ಎಂದು ಕೇಳಿದೆ. ಆತ ಆಟೋಮೇಷನ್‌ ಎಂಜಿನಿಯರ್‌ ಆಗಿದ್ದ ಎಂದು ತಿಳಿದಾಗ ನಿಜಕ್ಕೂ ನನಗೆ ಅಚ್ಚರಿಯಾಯಿತು. ಇತ್ತೀಚೆಗೆ ಕಂಪನಿಯು ಉದ್ಯೋಗ ಕಡಿತ ಮಾಡಿತ್ತು. ಹೀಗಾಗಿ ರ್‍ಯಾಪಿಡೋ ಓಡಿಸುತ್ತಿರುವೆ ಎಂದು ಆತ ತಿಳಿಸಿದ. ಇದೇ ಸಮಯದಲ್ಲಿ ಹೊಸ ಉದ್ಯೋಗ ಪಡೆಯಲು ಸಿದ್ಧತೆ ನಡೆಸುತ್ತಿರುವುದಾಗಿ ಆತ ತಿಳಿಸಿದ. ಈ ಹೊಸ ಉದ್ಯೋಗ ಹುಡುಕುವ...